೬ ವರ್ಷದ ಪುಟ್ಟ ಬಾಲಕಿಯ ಅತ್ಯಾಚಾರ ;ದುಷ್ಕರ್ಮಿಗಳ ಶಿಕ್ಷೆಗೆ ಬಳ್ಳಾರಿ ಜನತೆಯಿಂದ ಆಗ್ರಹ

ದೇಶ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಅತ್ಯಾಚಾರಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ .ಬಳ್ಳಾರಿಯಲ್ಲಿ ಆರು ವರ್ಷದ ಮಗುವಿನ ಅತ್ಯಾಚಾರ ನಡೆದಿದ್ದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.ಇತ್ತ ಅತ್ಯಾಚಾರ ಎಸಗಿದ ದುಷ್ಕರ್ಮಿಗಳಿಗೆ ಶಿಕ್ಷೆ ಆಗಬೇಕೆಂದು ಬಳ್ಳಾರಿಯ ಸಾರ್ವಜನಿಕರು ಹೋರಾಟ ನಡೆಸುತ್ತಿದ್ದಾರೆ .ಇನ್ನು ದುಷ್ಕರ್ಮಿಗಳು ಆ ಪುಟ್ಟ ಬಾಲಕಿಯನ್ನು ಅತ್ಯಾಚಾರವೆಸಗಿ ಗೋಣಿ ಚೀಲದಲ್ಲಿ ತುಂಬಿಸಿ ಬಿಟ್ಟು ಹೋಗಿರುವಂಥ ಘಟನೆ ಬೆಳಕಿಗೆ ಬಂದಿದ್ದು ಇದನ್ನು ಖಂಡಿಸಿ ,ಆ ಚಿಕ್ಕ ಮಗುವನ್ನು ನೋಡಿ ಅವರಿಗೆ ಹೇಗೆ ಅತ್ಯಾಚಾರ ಮಾಡಲು ಮನಸ್ಸು ಬರುತ್ತೋ ದೇವರಿಗೇ ಗೊತ್ತು ಆ ಮಗುವಿನ ಹೆತ್ತ ಕರುಳ ನೋವು ಏನು ಅಂತ ಅವರಿಗೆ ಗೊತ್ತಾಗದೆ ಹೋಯಿತೆ? ನಮ್ಮ ದೇಶದಲ್ಲಿ ಅತ್ಯಾಚಾರ ಮಾಡಿದವರಿಗೆ ಒಂದು ಕಠಿಣ ಕ್ರಮ ಜಾರಿಗೆ ಬರಬೇಕು ಇಂತಹ ಕೃತ್ಯ ಮಾಡಲು ಎಲ್ಲರೂ ಹೆದರುವಂಥ ಶಿಕ್ಷೆಯನ್ನು ನಮ್ಮ ನ್ಯಾಯಾಲಯ ಮಾಡಬೇಕು ಅಲ್ಲಿಯವರೆಗೆ ದೇಶದ ಎಲ್ಲ ಯುವ ನಾಗರಿಕರು ಹೋರಾಡಬೇಕು ಅಂತ ಸ್ಥಳೀಯರ ಆಗ್ರಹವಾಗಿದೆ .

Be the first to comment

Leave a Reply

Your email address will not be published.


*