ಹೊಸ ಸಂಚಾರ ನಿಯಮದ ಜೊತೆಗೆ ವಾಹನ ಚಾಲಕರಿಗೆ ಮತ್ತೊಂದು ಶಾಕ್ …!

ಹೊಸ ಸಂಚಾರ ನಿಯಮದಿಂದಾಗಿ ಸವಾರರಿಗೆ ಶಾಕ್ ಮೇಲೆ ಶಾಕ್ ಆಗಿದೆ .ಹೌದು ಹೊಸ ಟ್ರಾಫಿಕ್ ದಂಡ ಜಾರಿಯಿಂದಾಗಿ ವಾಹನ ಸವಾರರು ವಾಹನವನ್ನು ಹೊರಗೆ ತರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ .ಇನ್ಮುಂದೆ ಸವಾರರು ಸ್ಲಿಪ್ಪರ್ ಹವಾಯಿ ಚಪ್ಪಲ್ ಹಾಕಿಕೊಂಡು ಗೇರ್ ಹೊಂದಿರುವ ದ್ವಿಚಕ್ರ ವಾಹನವನ್ನು ಓಡಿಸುವಂತಿಲ್ಲ ಅಂತ ಟ್ರಾಫಿಕ್ ರೂಲ್ಸ್ ತರಲಾಗಿದೆ .ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ೧೦೦೦ರೂಪಾಯಿ ದಂಡ ಕಟ್ಟಿಟ್ಟ ಬುತ್ತಿ. ಇನ್ನು ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ ೧೫ದಿವಸಗಳ ಜೈಲು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ .ಅಂದಹಾಗೆ ಸಂಚಾರ ನಿಯಮ ಉಲ್ಲಂಘಿಸಿ ೮೬೫೦೦ರೂಪಾಯಿ ದಂಡ ತೆತ್ತ ಲಾರಿ ಚಾಲಕ ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿದರೆ ,ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು ,ವಾಹನ ನಿಯಂತ್ರಣಕ್ಕೆ ಪಾರ್ಕ್ ಮಾಡಲು ,ಪಾರ್ಕಿಂಗ್ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಉತ್ತಮ ಎಂಬುದು ನಿಯಮದ ಉದ್ದೇಶವಾಗಿದೆ .೧೯೮೮ರ ಮೋಟಾರು ವಾಹನ ಕಾಯ್ದೆಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ ಇಲ್ಲಿಯವರೆಗೆ ಈ ನಿಯಮವನ್ನು ಗಂಭೀರವಾಗಿ ಟ್ರಾಫಿಕ್ ಪೊಲೀಸರು ಗಮನಿಸುತ್ತಿರಲಿಲ್ಲ. ಆದರೆ ಈಗ ದೇಶದ ವಿವಿಧ ಕಡೆಗಳಲ್ಲಿ ಈ ನಿಯಮವನ್ನು ಪಾಲಿಸಲು ಮುಂದಾಗಿದ್ದು ಹಲವು ನಗರಗಳಲ್ಲಿ ಸವಾರರು ಈ ಪ್ರಕರಣದ ಅಡಿ ದಂಡ ಪಾವತಿಸಿದ್ದಾರೆ .೧೦೦೦ಸಾವಿರ ರುಪಾಯಿ ದಂಡ ಹೊಸ ಟ್ರಾಫಿಕ್ ದಂಡ ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರು ಕೂಡ ಫುಲ್ ಆ್ಯಕ್ಟಿವ್ ಆಗಿದ್ದು ,ಲೈಸೆನ್ಸ್, ಹೆಲ್ಮೆಟ್ ಸೇರಿ ಎಲ್ಲ ರೀತಿಯ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.ಹೀಗಾಗಿ ದಂಡದ ಮೊತ್ತವು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ .

 

Be the first to comment

Leave a Reply

Your email address will not be published.


*