ಬದುಕಿನೊಂದಿಗೆ ಸೆಣಸಾಡುತ್ತಿರುವ ಸಿಂಚನ ;ಮತ್ತೆ ಜೀವ ಉಳಿಸಲು ಬೇಕಾಗಿದೆ ಧನಸಹಾಯ

ಉಡುಪಿ ಜಿಲ್ಲೆಯ ಸಾಯಿಬ್ರಕಟ್ಟೆ ನಿವಾಸಿಯಾದ ಶಂಭು ಇವರ ಮಗಳಾದ ಸಿಂಚನಾಳು ತೀವ್ರತರವಾದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾಳೆ. ಬಹಳ ಚುರುಕಾಗಿದ್ದ ಹೆಣ್ಣು ಸುಮಾರು 3 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಬದುಕಿನೊಂದಿಗೆ ಸೆಣಸಾಡುತ್ತಿದ್ದಾಳೆ. ಇವರ ಕುಟುಂಬವು ಬಡತನದಲ್ಲಿದ್ದು ಮನೆಯ ಪರಿಸ್ಥಿತಿ ನೋಡುವಾಗ ಎಂತಹ ಕಟುಕರಿಗಾದರೂ ಮನ ನೋಯಲೇ ಬೇಕು. ಮಗುವಿನ ಚಿಕಿತ್ಸೆಗೆ ಮತ್ತು ಕಿಡ್ನಿ ಜೋಡಣೆಗೆ ಸುಮಾರು 8 ರಿಂದ 10 ಲಕ್ಷ ರೂಪಾಯಿ ವೆಚ್ಚ ತಗುಲಬಹುದೆಂದು ವೈದ್ಯರು ತಿಳಿಸಿರುತ್ತಾರೆ. ಕಿಡ್ನಿ ಜೋಡಣೆಯವರೆಗೆ ವಾರಕ್ಕೆ 2 ಬಾರಿ ಡಯಾಲಿಸಿಸ್ ನಡೆಸಲೇಬೇಕು. ಆದರೆ ಕಿಡ್ನಿ ಡಯಾಲಿಸಿಸ್‍ಗೆ ವಾರಕ್ಕೆ 8 ರಿಂದ 10 ಸಾವಿರ ರೂಪಾಯಿ ಖರ್ಚಾಗುತ್ತದೆ. ಕಿತ್ತು ತಿನ್ನು ಬಡತನ ಒಂದೆಡೆಯಾದರೆ ಮಗುವಿನ ಚಿಕಿತ್ಸೆಯ ಚಿಂತೆ ಇನ್ನೊಂದೆಡೆ. ಈ ಪರಿಸ್ಥಿತಿಯಲ್ಲಿ ಮಗುವನ್ನು ಉಳಿಸಲೇಬೇಕಾದ ಅನಿವಾರ್ಯ ಸ್ಥಿತಿ ಮನೆಯವರದ್ದು. ಸಿಂಚನಾಳ ಕುಟುಂಬವು ಚಿಂತಾಕ್ರಾಂತರಾಗಿದ್ದು ಕಂಗಾಲಾಗಿರುತ್ತಾರೆ. ಈ ಕುಟುಂಬಕ್ಕೆಸಹಾನುಭೂತಿಯ ನೆಲೆಯಲ್ಲಿ ಸರ್ವರ ಸಹಕಾರ ಅಗತ್ಯವಿದೆ.ಈ ಕಾರಣಕ್ಕೆ ಸಹೃದಯಿಗಳಾದ ತಾವುಗಳು ತಮ್ಮಿಂದ ಆದಷ್ಟು ತನು ಮನ ಧನದ ಸಹಕಾರದೊಂದಿಗೆ ಈ ಕುಟುಂಬದ ಜೊತೆ ಕೈ ಜೋಡಿಸಿ ತೀರಾ ಸಂಕಷ್ಟಕ್ಕೊಳಗಾಗಿರುವ ಈ ಕುಟುಂಬಕ್ಕೆ ಸಾಂತ್ವಾನ ನೀಡಬೇಕಾಗಿದೆ.ಇವರನ್ನು ಸಂಪಕಿ೯ಸುವ ಮೊಬೈಲ್ ಸಂಖ್ಯೆ : -+91 94803 97118ಈ ಮಗುವಿನ ಚಿಕಿತ್ಸೆಗೆ ಧನ ಸಹಾಯವನ್ನು ಮಾಡುವವರು ಈ ಬ್ಯಾಂಕ್ ಖಾತೆಗೆ ಹಣ ಪಾವತಿ ಮಾಡಿ :- ಸಂಖ್ಯೆಗೇ ತಿಳಿಸಿ. 7975374640

Be the first to comment

Leave a Reply

Your email address will not be published.


*