ಕಾರ್ತಿಕ್ ಸುವರ್ಣ ಕೊಲೆ ಪ್ರಕರಣ; ಮೂವರು ಆರೋಪಿಗಳು ಅಂದರ್

ಪುತ್ತೂರು ಆರ್ಯಾಪು ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಬಂಧಿತ ಆರೋಪಿಗಳನ್ನು ಪುತ್ತೂರು ಆರ್ಯಾಪು ಗ್ರಾಮದ ೨೬ ವರ್ಷದ ಚರಣ್ , ಈತನ ಸಹೋದರ ೩೬ ವರ್ಷದ ಕಿರಣ್ , ಮತ್ತು ಮಂಗಳುರು ಉಳ್ಳಾಲ ಬೈಲು ನಿವಾಸಿ ೨೮ ವರ್ಷದ ಪ್ರೀತೆಶ್ ಎಂದು ತಿಳಿದು ಬಂದಿದೆ.ಇನ್ನು ಹಿಂದೂ ಜಾಗರಣ ವೇದಿಕೆಯ ಮುಖಂಡನಾಗಿದ್ದ ಕಾರ್ತೀಕ್ ಸುವರ್ಣ ಗಣೇಶೊತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ನೋಡುತ್ತಿದ್ದ ವೇಳೆ ಈ ಮೂವರು ಬಂದು ಬರ್ಬರವಾಗಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದರು . ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ ಲಕ್ಷ್ಮೀ ಪ್ರಸಾದ್ ಪರಿಶೀಲನೆ ನಡೆಸಿದಲ್ಲದೆ ಎಸ್ಪಿ ನೇತೃತ್ವದ ಪೊಲೀಸರ ತಂಡ ಮರುದಿನವೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

 

Be the first to comment

Leave a Reply

Your email address will not be published.


*