ಪಚ್ಚನಾಡಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ; ನೆರೆ ಪೀಡಿತರ ಬಳಿ ಮಾಹಿತಿ ಕಲೆ

ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಇಡೀ ಊರಿಗೆ ಊರೆ ಮುಳುಗಿ ಹೋಗಿತ್ತು. ಅದರಲ್ಲೂ ತ್ಯಾಜ್ಯ ವಿಲೇವಾರಿ ಘಟಕ ಕಣ್ಮರೆಯಾಗಿದ್ದು ಸುತ್ತಲಿನ ಗ್ರಾಮಗಳಿಗೆ ಕಸ ಕೊಚ್ಚಿ ಹೋಗಿ ನಿಂತಿದ್ದು ಇದೀಗ ಅಲ್ಲಿ ವಾಸಿಸದ ಸ್ಥಿತಿ ಗ್ರಾಮಸ್ಥರದಾಗಿದೆ. ಇನ್ನು ನೆರೆ ಬಂದು ಹೋಗಿ ದಿನಗಳಾದ್ರು ಸರ್ಕಾರ ಮಾತ್ರ ಇತ್ತಕಡೆ ತಲೆ ಹಾಕೋದು ವಿಪರ್ಯಾಸ .ಇನ್ನು ಇಂದು ಮಂಗಳೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇರವಾಗಿ ಮಂಗಳೂರಿನ ಪಚ್ಚನಾಡಿಗೆ ತೆರಳಿದ್ದಾರೆ .ಅಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಿ.ಎಂ ಕಸ ವಿಲೇವಾರಿ ಘಟಕದಲ್ಲಾದ ಅವಾಂತರಗಳನ್ನು ಪರಿಶೀಲಿಸಿ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ ನೆರೆಯಿಂದ ೨೭ ಮನೆಗಳು ನಾಶವಾಗಿದೆ ಅದರಲ್ಲಿ ೧೭ ಮನೆಗಳು ವಾಸಿಸಲು ಸಾಧ್ಯವಾಗದೇ ಗಂಜಿ ಮಠದಲ್ಲಿ ವಾಸಿಸುತ್ತಿದೆ. ಇನ್ನು ಕೃಷಿ ಭೂಮಿನಾಶವಾಗಿದ್ದು ಜನರ ಪರದಾಡುತ್ತಿದ್ದಾರೆ. ಇನ್ನು ಇದಕ್ಕೆ ಸಕಾರ ಶಾಸ್ವತ ಪರಿಹಾರ ಕಂಡುಕೊಳ್ಳಬೇಕು. ಈಗ ಕಸ ನಿಂತ ಜಾಗವನ್ನು ಶಾಸ್ವತವಾಗಿ ತ್ಯಾಜ್ಯ ಘಟಕ ಮಾಡಬೇಕು. ಇಲ್ಲ ಅದನ್ನು ವಿಲೇವಾರಿ ಮಾಡಿ ತ್ಯಾಜ್ಯ ಘಟಕಕ್ಕ ಸೇರಿಸಬೇಕು . ನಷ್ಟ ಅನುಭವಿಸಿದ ಸ್ಥಳೀಯರಿಗೆ ಪರಿಹಾರ ನೀಡಬೇಕು . ಇನ್ನು ಮಹಾನಗರ ಪಾಲಿಕೆಯವರು ಮುಂದಾಲೋಚನೆ ಇಲ್ಲದೆ ನಿರ್ಧಾರ ಕೈಗೊಂಡಿದ್ದಾರೆ ಅಂತ ತಿಳಿಸಿದ್ರು.ಇನ್ನು ಈ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸಚೇತಕ ಐವನ್ ಡಿಸೋಜ, ಶಾಸಕ ಯು.ಟಿ ಖಾದರ್, ಮಾಜಿ ಮೇಯರ್ ಕವಿತಾ ಸನಿಲ್ , ಮಿಥುನ್ ರೈ ಸೇರಿ ಮೊದಲಾದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಕೈಜೋಡಿಸಿದ್ದಾರೆ .

 

Be the first to comment

Leave a Reply

Your email address will not be published.


*