” ಯುವಕರು ಅತ್ಯಾಚಾರಕ್ಕೆ ವಿರುದ್ದವಾಗಿ” ಉಪಕ್ರಮ ಅಭಿಯಾನದ ಉದ್ಘಾಟನೆ

ಇಂದು ಮಂಗಳೂರಿನ ಕೆಂಜಾರ್‌ನ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಯುವಕರು ಅತ್ಯಾಚಾರಕ್ಕೆ ವಿರುದ್ದವಾಗಿ ಎಂಬ ಅತ್ಯಾಚಾರದ ವಿರುದ್ದ ಹೋರಾಡಲು ದಕ್ಷಿಣ ಕನ್ನಡ ವಿದ್ಯಾರ್ಥಿಗಳು ಕೈಗೊಂಡ ಉಪಕ್ರಮ ಅಭಿಯಾನವನ್ನು ಉದ್ಘಾಟನೆ ಮಾಡಲಾಯಿತು. ಇನ್ನು ಕಾರ್ಯಕ್ರಮವನ್ನು ಕ್ಯಾಂಪಸ್‌ನ ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್ ಕೆ ಉದ್ಘಾಟಿಸಿದರು. ಇನ್ನು ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡದ ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.ಅಂದಹಾಗೆ ಅತ್ಯಾಚಾರದ ವಿರುದ್ಧ ಹೋರಾಡಲು ಮತ್ತು ಲೈಂಗಿಕ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲು ಅಖಿಲ ಭಾರತ ಉಪಕ್ರಮವಾಗಿದೆ .ಈ ಅಭಿಯಾನವು ಯುವಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸಮಾಜದ ಪ್ರತಿಯೊಬ್ಬ ಮಹಿಳೆಯರನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಲಾಯಿತು.

Be the first to comment

Leave a Reply

Your email address will not be published.


*