ಒಂದು ವರ್ಷದ ಸಂಭ್ರಮದಲ್ಲಿ ಉಡುಪಿ ಹೆಲ್ಪ್‌ಲೈನ್ ; ವಾಹನದ ವ್ಯವಸ್ಥೆಗಾಗಿ ದಾನಿಗಳ ಹುಡುಕಾಟ

ಸಮಾಜಸೇವೆ ಇದು ನಿಸ್ವಾರ್ಥ ಮನಸ್ಸಿನಿಂದ ಮಾಡೋ ಕೆಲಸ . ಕೆಲವೊಬ್ಬರು ಹೆಸರಿಗಾಗಿ, ಘನತೆಗಾಗಿ ಸಮಾಜಸೇವೆ ಮಾಡಿದ್ರೆ; ಇನ್ನು ಕೆಲವೊಬ್ಬರು ತಮ್ಮ ಮನಸ್ಸಿನ ನೆಮ್ಮದಿಗಾಗಿ ಸಮಾಜ ಸೇವೆಯನ್ನು ಮಾಡುತ್ತಾರೆ. ಇನ್ನೂ ಕೆಲವರು ಇನ್ನೊಬ್ಬರ ಕಷ್ಟವನ್ನು ಅನುಭವಿಸಿ ಅದನ್ನರಿತು ಸಮಾಜ ಸೇವೆಗೆ ಇಳಿಯುತ್ತಾರೆ. ಅಂತಹ ಸಮಾಜ ಸೇವಾ ಸಂಸ್ಥೆಗಳಲ್ಲೊಂದು ಉಡುಪಿ ಹೆಲ್ಪ್ ಲೈನ್ ಸಂಸ್ಥೆ .

ಉಡುಪಿ ಹೆಲ್ಪ್ ಲೈನ್ ಸಮಾಜ ಸೇವಾ ಸಂಸ್ಥೆ .ಹೆಸರಿಗೆ ತಕ್ಕಂತೆ ಈ ಸಂಸ್ಥೆ ಉಡುಪಿಯ ಸುತ್ತಮುತ್ತಿಲಿನ ಅದಷ್ಟೋ ಬಡಬಗ್ಗರ ಆಶಾಕಿರಣ. ಹಸಿದವರ ಬಾಳಿನ ಆಶಾಕಿರಣ ಅನ್ನೋ ಸುಂದರ ಹಾಗೂ ಅರ್ಥಪೂರ್ಣ ಘೋಷವಾಕ್ಯವನ್ನೊಂದಿರೋ ಈ ಸಂಸ್ಥೆ; ತಮ್ಮ ಟ್ಯಾಗ್‌ಲೈನ್‌ಗೆ ತಕ್ಕಂತೆ ಕೆಲಸವನ್ನು ನಿರ್ವಹಿಸುತ್ತಿದೆ..ಅದೆಷ್ಟೋ ಸ್ಲಂ ನಿವಾಸಿಗಳಿಗೆ , ಅನಾಥಾಶ್ರಮಗಳಿಗೆ, ಬಡವರಿಗೆ ಒಂದು ಹೊತ್ತಿನ ಊಟವನ್ನು ಕಲ್ಪಿಸಿ ಮಾನವೀಯತೆ ಮೆರೆಯುತ್ತಿದೆ.

 

ಹೌದು .. ಇತ್ತೀಚಿನ ದಿನಗಳಲ್ಲಿ ಸಭೆ ಸಮಾರಂಭ ಮಾಡುವುದು ಅಂದ್ರೆ ಡೊಡ್ಡಸ್ಥಿಕೆ ತೋರಿಸೋ ಸಂಭ್ರಮವಾಗಿ ಬಿಟ್ಟಿದೆ. ಬೇಕಾಬಿಟ್ಟಿ ಭೋಜನ ವ್ಯವಸ್ಥೆಯನ್ನು ಮಾಡಿ ನಂತರ ಉಳಿದ ಅನ್ನವನ್ನು ಎಲ್ಲೆಂದರಲ್ಲಿ ಬಿಸಾಕೋದು ಇದೀಗ ವಾಡಿಕೆಯಾಗಿ ಬಿಟ್ಟಿದೆ. ಆದ್ರೆ ನಮ್ಮ ಸಮಾಜದಲ್ಲಿ ಅದೆಷ್ಟೋ ಜನರಿಗೆ ಒಂದು ಹೊತ್ತಿನ ಊಟವನ್ನು ಮಾಡುವಷ್ಟು ಶಕ್ತಿ ಇರೋದಿಲ್ಲ. ಇದೆಲ್ಲಾ ಸಮಾಜದ ಪರಿಸ್ಥಿತಿ.. ಆದ್ರೆ ಇದನ್ನು ಮನಗಂಡಿರೋ ಉಡುಪಿ ಹೆಲ್ಪ್‌ಲೈನ್ ಸಂಸ್ಥೆ, ಇದರ ಬಗ್ಗೆ ಕೂಲಕುಂಶವಾಗಿ ಪರಿಶೀಲಿಸಿ ಸಭೆ ಸಮಾರಂಭಗಳಲ್ಲಿ ಉಳಿದ ಅನ್ನವನ್ನು ಸಂಗ್ರಹಿಸಿ ಸರಿಯಾದ ಸಮಯಕ್ಕೆ ಹಸಿದ ಹೊಟ್ಟೆಗೆ ತಲುಪಿಸುವ ಕಾರ್ಯ ನಡೆಸುತ್ತಿದೆ.

ಜುಲೈ ೨೫ ಕ್ಕೆ ೪೦ ಮಂದಿಯ ತಂಡದೊಂದಿಗೆ ಆರಂಭವಾದ ಉಡುಪಿ ಹೆಲ್ಪ್‌ಲೈನ್ ಅನ್ನೋ ಉತ್ತಮ ಸಂಸ್ಥೆ, ತಮ್ಮಿಂದಾದ ಮಟ್ಟಿಗೆ ಊಟವನ್ನು ಸಾಗಿಸೋ ಕೆಲಸವನ್ನು ಮಾಡುತ್ತಿತ್ತು. ಯಾವುದೇ ಆಸೆ ಆಕಾಂಕ್ಷೆಗಳಿಲ್ಲದೆ ನಿಸ್ವಾರ್ಥ ತನದಿಂದ ಮಹೇಶ್ ಪೂಜಾರಿ ಹೂಡೆ, ರಫೀಕ್ ಕಲ್ಯಾಣ್ ಪುರ ಹಾಗೂ ಫಹದ್ ಮೂಲೂರುರವರ ನೇತೃತ್ವದಲ್ಲಿ ಆರಂಭವಾದ ಈ ಸಂಸ್ಥೆ ಕಳೆದ ಒಂದು ವರ್ಷದಿಂದ ಸುಮಾರು ೧೫೪೦೦ ಕ್ಕೂ ಅಧಿಕ ಊಟವನ್ನು ಅನಾಥಶ್ರಮ, ಬುದ್ದಿಮಾಂದ್ಯ ಹಾಗೂ ವಿಕಲಚೇತನ ಮಕ್ಕಳ ಶಾಲೆ, ಅಲೆಮಾರಿ ಸ್ಲಂ ಹಾಗೂ ಬಡಕಾಲೋನಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

 

ಇನ್ನು ಈ ಸಂಸ್ಥೆ ಉಗಮವಾಗೋದಕ್ಕೆ ಬಲವಾದ ಕಾರಣವೂ ಒಂದಿದೆ.. ಕಳೆದ ೨೦೧೮ರಲ್ಲಿ ಅತಿಯಾಗಿ ಮಳೆ ಸುರಿದ ಕಾರಣ ಕೊಡಗು- ಕೇರಳದಲ್ಲಿ ಅನಾವೃಷ್ಟೀ ಸಂಭವಿಸಿದ್ದು ,ಜನರು ಮನೆ- ಮಠ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದರು.ಈ ನೋವನ್ನು ಅರಿತಿರುವ ಮಹೇಶ್ ಪೂಜಾರಿ ಹೂಡೆ, ರಫೀಕ್ ಕಲ್ಯಾಣ್ ಪುರ ಹಾಗೂ ಫಹದ್ ಮೂಲೂರುರವರ ನೇತೃತ್ವದ ತಂಡ ೪೦ ಸದಸ್ಯರುಳ್ಳ ತಂಡವೊಂದನ್ನು ರಚಿಸಿ, ತಾವು ಹಸಿದ ಯಾರಬ್ಬರ ಹೊಟ್ಟೆಯನ್ನು ಖಾಲಿ ಇಡಬಾರದು ಎಂಬ ದೃಢ ನಿರ್ಧಾರವನ್ನು ಮಾಡಿ ಒಂದು ಸಮಾಜಮುಖಿ ಕೆಲಸಕ್ಕೆ ಕೈಹಾಕಿತು. ತಂಡ ಸುದೀರ್ಘವಾಗಿ ಯೋಚಿಸಿದಾಗ ಹೊಳೆದ ಯೋಚನೆಯೆಂದ್ರೆ, ಶ್ರೀಮಂತರ ಮನೆಯಲ್ಲಿ ಶುಭ ಸಮಾರಂಭ ನಡೆದಾಗ ಅಲ್ಲಿ ಅನ್ನ ಉಳಿಯುತ್ತೆ .ಅದನ್ನು ಬಿಸಾಡೋ ಬದಲು ಅದೇ ಅನ್ನವನ್ನು ಹಸಿದ ಹೊಟ್ಟೆಗಳಿಗೆ ನೀಡಬೇಕು ಎಂಬ ನಿರ್ಧಾರವನ್ನು ಮಾಡಿದ್ರು.. ಅದಕ್ಕಾಗಿ ಅವರು ಹೆಜ್ಜೆಯಿಟ್ಟಾಗ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿತು..

ಬಳಿಕ ತಮ್ಮಲ್ಲಿದ್ದ ವಾಹನ, ಪಾತ್ರಗಳನ್ನು ಬಳಸಿ ಕಳೆದ ಒಂದು ವರ್ಷದಿಂದ ಇಂಥಹ ಸೇವೆಯನ್ನು ನಡೆಸುತ್ತಾ ಬರುತ್ತಿದ್ದಾರೆ.. ಇನ್ನು ಕಳೆದ ಜುಲೈ ೨೫ರಂದು ಈ ಸಂಸ್ಥೆ ೧ ವರ್ಷವನ್ನು ಪೂರೈಸಿ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದು ಅದರ ಅಂಗವಾಗಿ ತಮ್ಮ ಸಂಸ್ಥೆಯ ಮೊದಲನೇ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಬ್ರಹ್ಮಾವರದ ಮಟಪಾಡಿಯಲ್ಲಿರುವ ವಿಜಯ ಬಾಲನಿಕೇತನ ಬಡ ಹಾಗೂ ಅಸಕ್ತ ವಿದ್ಯಾರ್ಥಿಗಳ ಆಶ್ರಮದಲ್ಲಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು . ಇನ್ನು ಉಡುಪಿ ಹೆಲ್ಪ್ ಲೈನ್ ಸಂಸ್ಥೆ ವತಿಯಿಂದ ಈ ಆಶ್ರಮಕ್ಕೆ ಶುದ್ದ ಕುಡಿಯುವ ನೀರಿನ ಯಂತ್ರದ ಜೊತೆಗೆ ಅಲ್ಲಿಯ ಮಕ್ಕಳಿಗಾಗಿ ದಿನಬಳಕೆಯ ವಸ್ತುಗಳನ್ನು ಕೊಡುಗೆಯಾಗಿ ನೀಡಿ ತಮ್ಮ ಸಂಸ್ಥೆಯ ಮೊದಲನೇ ವಾರ್ಷಿಕೋತ್ಸವವನ್ನು ಆಚರಣೆ ಮಾಡಲಾಯಿತು ..

 

ಇದೇ ಸಂದರ್ಭದಲ್ಲಿ ಹೂವಿನ ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಮಾಜ ಸೇವೆ ಮಾಡುತ್ತಿರುವವರಿಗೆ ಸನ್ಮಾನ ಮಾಡಲಾಯಿತು. ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎನ್.ಎಮ್.ಸಿ ನ್ಯೂಸ್‌ನ ನ್ಯೂಸ್ ಎಡಿಟರ್ ದೀಪಿಕಾ , ಪವನ್ ಶಿರ್ವ, ಚಂದ್ರಹಾಸ್ ಉಡುಪ, ಉಡುಪಿ ಹೆಲ್ಪ್ ಲೈನ್ ಅಧ್ಯಕ್ಷರಾದ ಮಹೇಶ್ ಪೂಜಾರಿ ಹೂಡೆ, ಪ್ರಧಾನ ಕಾರ್ಯದರ್ಶಿ ರಫೀಕ್ ಕಲ್ಯಾಣ್ ಪುರ , ಧನುಷ್ ಶೆಟ್ಟಿ ಬಾಲನಿಕೇತನ ಆಡಳಿತ ವರ್ಗ ಅಧ್ಯಕ್ಷರು ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ .

ಒಂದು ಸಮಾಜ ಸೇವಾ ಸಂಸ್ಥೆ ಅಂದಮೇಲೆ .ಅದು ಯಾವುದೇ ಆಸೆಗಳಿಲ್ಲದೆ , ಒಬ್ಬರ ಲಾಭಕ್ಕಾಗಿ ನಡೆಸೋ ಸಂಸ್ಥೆಯಲ್ಲ.. ಬದಲಾಗಿ ತಮ್ಮಿಂದಾದಷ್ಟರ ಮಟ್ಟಿಗೆ ಪರರಿಗೆ ಸಹಾಯ ಮಾಡೋ ಕೈಗಳು ಆ ಸಂಸ್ಥೆಯಲ್ಲಿರುತ್ತಾರೆ. ಅಂದಮೇಲೆ . ಅಲ್ಲಿ ಕೆಲವೊಂದು ಕಷ್ಟಗಳು , ಕುಂದುಕೊರತೆಗಳು ಇದ್ದೇ ಇರುತ್ತೆ. ಅದರಂತೆ ಈ ಉಡುಪಿ ಹೆಲ್ಪ್ ಲೈನ್ ಸಂಸ್ಥೆಯ ಮುಖ್ಯ ಸಮಸ್ಯೆಯೆಂದರೆ ವಾಹನದ ಸಮಸ್ಯೆ.. ಯಾಕಂದ್ರೆ ಸಮಾರಂಭಗಳು ನಡೆದ ಸಂದರ್ಭದಲ್ಲಿ ಉಳಿದ ಅನ್ನವನ್ನು ಸರಿಯಾದ ಸಮಯಕ್ಕೆ ಸೇರಿಸದಿದ್ದಲಲ್ಲಿ ಅನ್ನ ಹಳಸಿ ಹೋಗುತ್ತೆ.. ಅದಕ್ಕಾಗಿ ವಾಹನದ ಅತ್ಯವಶ್ಯಕವಿದೆ.. ಇದೀಗ ಈ ಸಂಸ್ಥೆಗೆ ಸ್ವಂತ ವಾಹನ ಸೌಲಭ್ಯ ಅಗತ್ಯವಾಗಿದೆ.. ಯಾರಿಗಾದ್ರೂ ಅದಕ್ಕೆ ತಕ್ಕಂತೆ ವಾಹನವನ್ನು ಕಲ್ಪಿಸುವ ಮನಸ್ಸು , ತಮ್ಮಿಂದ ಸಮಾಜ ಸೇವೆಯನ್ನು ಮಾಡೋ ಬೇಕು ಅನ್ನೋ ಹಂಬಲವಿದ್ದರೆ , ಈ ಸಂಸ್ಥೆಗೆ ವಾಹನವನ್ನು ದಾನದ ರೂಪದಲ್ಲಿ ದಾನಿಗಳು ನೀಡಬೇಕು ಅಂತ ಉಡುಪಿ ಹೆಲ್ಪ್ ಲೈನ್ ಸಂಸ್ಥೆ ಇಚ್ಚಿಸುತ್ತಿದೆ.. ಒಟ್ಟಾರೆ ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡುತ್ತಿರುವ ಉಡುಪಿ ಹೆಲ್ಪ್ ಲೈನ್ ಅನ್ನೋ ಸಮಾಜ ಸೇವಾ ಸಂಸ್ಥೆ ಒಂದು ವರ್ಷವನ್ನು ಪೂರೈಸಿದೆ.. ಈ ಸಂಸ್ಥೆ ಇನ್ನೂ ಸೂರ್‍ಯ ಚಂದ್ರ ಇರುವವರೆಗೆ ಇಂತಹ ಉತ್ತಮ ಕಾರ್ಯಗಳನ್ನು ಮಾಡೋದರ ಮೂಲಕ ಉಳಿದವರಿಗೂ ಮಾದರಿಯಾಗಲಿ ಅನ್ನೋದು ನಮ್ಮ ಆಶಯ

Be the first to comment

Leave a Reply

Your email address will not be published.


*