ಮಣ್ಣಗುಡ್ಡೆ ಮೋಹನ್‌ರಾವ್ ನಿವಾಸದಲ್ಲಿ ೯೦ ವರ್ಷದಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿ

ದೇಶೆದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮದ ತಯಾರಿ ಜೋರಾಗಿ ನಡೆಯುತ್ತಿದೆ. ಇನ್ನೇನು ಚೌತಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲೆಡೆ ಗಣೇಶನ ಮೂರ್ತಿ ರಾರಾಜಿಸುತ್ತಿದೆ. ಇನ್ನು ಮಂಗಳೂರಿನಲ್ಲೂ ಗಣೇಶ ಹಬ್ಬದ ಪ್ರಯುಕ್ತ ಪೂರ್ವತಯಾರಿ ಜೋರಾಗಿದ್ದು ಕಳೆದ ೯೦ ವರ್ಷದಿಂದ ಪಾರಂಪರಿಕವಾಗಿ ಗಣೇಶ ವಿಗ್ರಹ ತಯಾರಿ ಮಾಡುತ್ತಿರೋ ಸಹೋದರರ ಕೆಲಸವೂ ಎಲ್ಲರ ಗಮನಸೆಳೆದಿದೆ. ಹೌದು ಮಂಗಳೂರಿನ ಮಣ್ಣಗುಡ್ಡೆಯ ಮೋಹನ್ ರಾವ್ ನಿವಾಸದಲ್ಲಿ ಕಳೆದ ೯೦ ವರ್ಷದಿಂದ ಪ್ರತಿವರ್ಷ ಚೌತಿಗೆ ತಪ್ಪದೆ ಮೂರ್ತಿ ತಯಾರಿ ನಡೆಯುತ್ತದೆ .ಈ ಬಾರಿಯು ನಿವಾಸದಲ್ಲಿ ಸುಮಾರು ೨೨೫ ಮೂರ್ತಿಗಳು ತಯಾರಿಯಾಗಿದ್ದು ಮೋಹನ್‌ರಾವ್ ನಿವಾಸಕ್ಕೆ ಮುಗಿಬೀಳುತ್ತಿದ್ದಾರೆ .ಅಂದಹಾಗೆ ಮಣ್ಣಗುಡ್ಡೆ ಮೋಹನ್‌ರಾವ್ ಹಿರಿಯ ಕಲಾವಿದರಾಗಿದ್ದು ನಗರದ ಜನತೆಗೆ ಇವರು ಚಿರಪರಿಚಿತ ಗಣೇಶೋತ್ಸವವನ್ನು ಹುಟ್ಟುಹಾಕಲು ಕಾರಣಕರ್ತರಾದ ಬಾಲಗಂಗಾಧರ್ ತಿಲಕ್ ಅಭಿಲಾಷೆಯಂತೆ ದೇವರ ಅನುಗ್ರಹಕ್ಕಾಗಿ ಚೌತಿ ಆಚರಣೆ ಮಾಡಲಾಗುತ್ತಿದ್ದು .ಅದರ ನಿಟ್ಟಿನಲ್ಲಿ ಕಳೆದ ೯೦ ವರ್ಷದಿಮದ ಪಾರಂಪರಿಕವಾಗಿ ಮಣ್ಣಿನ ಮೂರ್ತಿ ತಯಾರಾಗುತ್ತಿದೆ. ಇವರ ೪ ಜನ ಮಕ್ಕಳಾದ ಪ್ರಭಾಕರ್ ರಾವ್ , ದಿ.ದೀನಾನಾಥ ರಾವ್ , ಸುಧಾಕರ್ ರಾವ್ , ರಾಮಚಂದ್ರರಾವ್ ಹಾಗೂ ಅವರ ಮಕ್ಕಳು ಮೊಮ್ಮಕ್ಕಳು ಪ್ರತಿ ಗಣೇಶೋತ್ಸವ ಸಂದರ್ಭದಲ್ಲಿ ಮೂರ್ತಿಗಳನ್ನು ತಯಾರಿ ಮಾಡುತ್ತಾರೆ . ಉತ್ತಮ ಹುದ್ದೆಯಲ್ಲಿದ್ದರುತಮ್ಮ ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ .ಇನ್ನು ಇವರು ಹೇಳುವ ಪ್ರಕಾರ ಇದೊಂದು ಕಸುಬಲ್ಲ ಪ್ರವೃತ್ತಿ. ಅರ್ಪಣಾ ಮನೋಭಾವದಲ್ಲಿ ಈಗಾಗಲೇ ವಿಗ್ರಹ ಮಾಡಬೇಕೆಂದು ಹಿರಿಯ ಚೇತನರು ತಿಳಿಸಿದ್ದು ಅದರಂತೆ ನಡೆಯುತ್ತಿದ್ದೇವೆ ಎನ್ನುತ್ತಾರೆ . ಚಾರ್ತುದಶಿ ಶುಕ್ಲ ಮಾಸದಲ್ಲಿ ಚತುರ್ಥಿ ಆಚರಣೆ ಮಾಡುತ್ತಾರೆ.. ಈ ಹಬ್ಬ ಇಡೀ ದೇಶಕ್ಕೆ ಹಬ್ಬ ೧ ವರೆ ತಿಂಗಳು ಇಡೀ ಜನತೆ ಹಬ್ಬದ ಗೋಜಿನಲ್ಲಿ ಮುಳುಗಿಹೋಗಿರುತ್ತಾರೆ. ಇನ್ನು ಈ ಕಟುಂವ ಪೊಳಲಿ , ಗಂಜಿಮಟದಿಮದ ಆವೆಮಣ್ಣು ಹಾಗೂ ಅದಕ್ಕೆ ಬೇಕಾದ ಹುಲ್ಲನ್ನು ತಂದು ಯಾವುದೇ ರಾಸಾಯನಿಕ ಸೇರಿಸದೆ ಪರಿಸರ ಸ್ನೇಹಿ ಗಣಪತಿ ತಯಾರಿಸುತ್ತಾರೆ … ಇನ್ನು ಈ ಗಣಪತಿಗೆಕುಟುಂಬದವರು ಯಾವುದೆ ಬೆಲೆಯನ್ನು ಕಟ್ಟುವುದಿಲ್ಲ ತಮಗೆ ಇಷ್ಟಬಂದ ಹಣವನ್ನು ನೀಡಿ ಗಣಪತಿಯನ್ನು ತೆಗೆದುಕೊಂಡು ಹೋಗಬಹುದು. ಅದರಂತೆ ೧೬ ರಿಮದ ೨೦ ಗಣಪತಿ ಮೂರ್ತಿ ಸಂಘನಿಕೇತನ, ಪೊಲೀಸ್ ಲ್ಯಾಂಡ್, ಎಂ,ಸಿ.ಎಫ್ , ಎನ್.ಎಂ.ಪಿ.ಟಿ ಕೆ.ಎಂ.ಎಫ್ ಸೇರಿದಮತೆ ಹಲವೆಡೆ ಹೋದ್ರೆ . ಬಾಕಿ ಉಳಿದ ಗಣಪತಿ ಮೂರ್ತಿ ಮನೆಯಲ್ಲಿಡುವವರು ತೆಗೆದುಕೊಂಡು ಹೋಗುತ್ತಾರೆ . ಇನ್ನು ಒಂದು ಗಣಪತಿ ಪ್ರತಿವರ್ಷ ಶೆರ್ಲೆಕ್ ಕುಟುಂಬ ಅಮೇರಿಕಾಕ್ಕೆ ತೆಗೆದುಕೊಂಡು ಹೋಗುವುದು ವಿಶೇಷ .

Be the first to comment

Leave a Reply

Your email address will not be published.


*