ಉಡುಪಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ; ಮನವಿ ಸಲ್ಲಿಸಿದ ಆಟೋ ಯುನಿಯನ್ ಸದಸ್ಯರು

ಉಡುಪಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಜಗದೀಶ್ ಅವರಿಗೆ ವರ್ಗಾವಣೆಯಾಗಿದೆ.ಇವರಿಗೆ ಉಡುಪಿ ಜಿಲ್ಲಾ ಆಶ್ರಯದಾತ ಆಟೋ ಯುನಿಯನ್ ಸದಸ್ಯರು ಪುಪ್ಪವನ್ನು ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆಟೋ ಮೀಟರ್ ದರ ಹಲವು ವರ್ಷಗಳಿಂದ ಏರಿಕೆ ಕಂಡಿಲ್ಲ.ಮೀಟರ್ ದರ ೩೦ ರೂಪಾಯಿಗೆ ಏರಿಸುವಂತೆ ಮನವಿ ಸಲ್ಲಿಸಲಾಯಿತು.ಆಶ್ರಯದತ್ತ ಉಡುಪಿ ಜಿಲ್ಲಾ ಅಧ್ಯಕ್ಷ ಸಾದೀಕ್ ಮಿಷನ್ ಕಂಪೌಡ್,ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು,ಗೌರವ ಅಧ್ಯಕ್ಷ ಶೇಖರ್,ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಮೂಡಬೆಟ್ಟು, ಕೋಶಾಧಿಕಾರಿ ಲತೀಫ್ ಮಣಿಪುರ ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*