ಯಶಸ್ವಿಯಾದ ಅಂತರ್ ಜಿಲ್ಲಾಮಟ್ಟದ ಶಿಕ್ಷಕರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ; ಟಾರ್ಪಡೋಸ್ ವತಿಯಿಂದ ವಿಜೇತರಿಗೆ ಆಕರ್ಷಕ ಟ್ರೋಪಿ ಜೊತೆ ಪ್ರಮಾಣಪತ್ರ

ಇತ್ತೀಚೆಗೆ ಮಂಗಳೂರಿನ ಟಾರ್ಪೋಡೋಸ್ ಸ್ಪೋಟ್ಸ್ ಕ್ಲಬ್ ವತಿಯಿಂದ ವೃತ್ತಿಪರ ಶಿಕ್ಷಕರಿಗಾಗಿ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಜರುಗಿದ್ದು ,ಸುಮಾರು ೪೮ ಶಿಕ್ಷಕರು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ . ಜಿಲ್ಲೆಯ ಹಲವೆಡೆಯಿಂದ ಬಂದ ಶಿಕ್ಷಕರು ಪಂದ್ಯಾವಳಿಯಲ್ಲಿ ಆಡೋದರ ಮೂಲಕ ಎಂಜಾಯ್ ಮಾಡಿದ್ದಾರೆ .ಸದಾ ಮಕ್ಕಳಿಗೆ ಪಾಠ , ನೈತಿಕ ಮೌಲ್ಯವನ್ನು ಹೇಳುತ್ತಿದ್ದ ಶಿಕ್ಷಕರು ಒಂದು ದಿನದ ಮಟ್ಟಿಗೆ ತಾವೂ ಮಕ್ಕಳಾಗಿದ್ದು ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಕ್ಕಳಂತೆ ಸ್ಪರ್ಧೆಗಿಳಿದು ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ. ಅಂದಹಾಗೆ ಆ.೧೮ರಂದು ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪೋಡೋಸ್ ಸ್ಪೋಟ್ಸ್ ಕ್ಲಬ್‌ನಲ್ಲಿ ಪಂದ್ಯಾವಳಿ ಆಯೋಜಿಸಿದ್ದು, ಸಂಜೆ ವೇಳೆಗೆ ಸಮಾರೋಪ ಸಮಾರಂಭ ವನ್ನು ಆಯೋಜನೆ ಮಾಡಲಾಗಿತ್ತು . ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉದ್ಯಮಿ ಹಾಗೂ ಕ್ರೀಡಾ ಪ್ರವರ್ತಕ ಚಂದ್ರಶೇಖರ್ ಸಜ್ಜಾ ಭಾಗಿಯಾಗಿದ್ದು, ಪಂದ್ಯಾವಳಿ ಗೆದ್ದ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ . ಇನ್ನು ಶಿಕ್ಷಕರ ಅಂತರ್ ಜಿಲ್ಲಾ ಮಟ್ಟದ ಈ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ದೀಕ್ಷಿತ್ ಹಾಗೂ ಪ್ರಜ್ಞೇಶ್ ಮೊದಲಸ್ಥಾನವನ್ನು ಪಡೆದಿದ್ದು , ಎರಡನೇ ಸ್ಥಾನವನ್ನು ಕುಮಾರ್ ಹಾಗೂ ಅರುಣ್ ಬ್ಯಾಪ್ಟಿಸ್ಟ್ ಪಡೆದುಕೊಂಡಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಪ್ರಜ್ಞೇಶ್ ಪ್ರಥಮ ಸ್ಥಾನದ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದು , ೨ ನೇ ಸ್ಥಾನವನ್ನು ದೀಕ್ಷಿತ್ ಪಡೆದುಕೊಂಡಿದ್ದಾರೆ .ಅದೇ ರೀತಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ರಶ್ಮಿ ಮೊದಲ ಸ್ಥಾನವನ್ನು ಪಡೆದಿದ್ದು , ಬಬಿತಾ ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ . ಇನ್ನು ಗೆದ್ದ ವಿಜೇತರಿಗೆ ಆಕರ್ಷಕ ಟ್ರೋಫಿಯ ಜೊತೆಗೆ ಪ್ರಶಸ್ತಿಯನ್ನು ನೀಡಲಾಯಿತು . ಈ ಸಂದರ್ಭದಲ್ಲಿ ಉದ್ಯಮಿ ನಾಗಭೂಷಣ್ ರೆಡ್ಡಿ, ಗಣೇಶ್ ಕಾಮತ್ , ಕಾರ್ತಿಕ್ , ಸತೀಶ್ ಕೆ.ಪಿ, ರಾಘವೇಂದ್ರ , ಸಂಪತ್ ಹಾಗೂ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*