ನೆರೆಪೀಡಿತರಿಗೆ ಪರಿಹಾರ ಒದಗಿಸಲು ಸೂಕ್ತ ಸಮಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು – ಮಾಜಿ ಸಚಿವ ರೈ

ಇಂದು ಮಾಜಿ ಸಚಿವ ರೈ ಹಾಗೂ ತಂಡ ಕುಂದಾಪುರಕ್ಕೆ ಭೇಟಿ ನೀಡಿದ್ದು ,ಪತ್ರಿಕಾಗೋಷ್ಠಿ ನಡೆಸಿದ್ದಾರೆ .ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ರೈ ಸದ್ಯಕ್ಕೆ ಆದ ಮಂತ್ರಿಗಳಲ್ಲಿ ನೆರೆ ಸಂತ್ರಸ್ಥರಿಗೆ ಪರಿಹಾರ ನೀಡಲು ಒತ್ತಡ ದತರಲಾಗುತ್ತದೆ. ಪ್ರವಾಹದಿಂದ ಆದ ಜನರಿಗೆ ಆದಷ್ಟು ಸ್ಥಳೀಯ ಪ್ರತಿನಿಧಿಗಳು ಸ್ಪಂದಿಸಬೇಕು. ಅದಕ್ಕೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು . ಮಾತ್ರವಲ್ಲ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಅಂತ ತಿಳಿಸಿದ್ರು. ಇನ್ನು ಮಾತು ಮುಂದುವರಿಸಿದ ರೈ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ತುರ್ತಾಗಿ ೨೪ ಗಂಟೆಯೊಳಗಡೆ ಪರಿಹಾರ ಒದಗಿಸಿದೆ . ಅದಕ್ಕೆ ಇತಿಹಾಸವು ಇದೆ. ಆದ್ರೆ ಮುಖ್ಯಮಂತ್ರಿ ಪರಿಹಾರದ ಘೋಷಣೆ ರಾಜ್ಯಕ್ಕೆ ಮಾಡಿ ಹೋಗಿದ್ದಾರೆ .ಆದ್ರೆ ದ.ಕ ಜಿಲ್ಲೆಯ ಜನ ಇದರಿಂದ ವಂಚಿತರಾಗಿದ್ದಾರೆ. ಇನ್ನು ಮುಖ್ಯಂತ್ರಿಯ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಸ್ಥಳಿಯ ಶಾಸಕರು ಕ್ರಮವನ್ನು ಕೈಗೊಳ್ಳಬೇಕಿದೆ. ಇನ್ನು ಈಗಾಗಲೇ ಪ್ರವಾಹ ಬಂದು ೧೦ ರಿಂದ ೧೫ ದಿವಸ ಕಳೆದಿದೆ. ಆದ್ರೂ ತುರ್ತಾಗಿ ಸಿಗಬೇಕಾದ ಪರಿಹಾರ ಸಂತ್ರಸ್ಥರ ಕೈ ಸೇರಿಲ್ಲ. ಅಂದಹಾಗೆ ನಮ್ಮ ದೇಶದ ಪ್ರಧಾನಿಯಾದವರು . ನೆರೆ ಸಂತ್ರಸ್ಥರ ಕಣ್ಣೋರೆಸುವ ಬದಲು . ಇಂಥಹ ಪರಿಸ್ಥಿಯ ಸಂದರ್ಭದಲ್ಲಿ ಭೂತಾನಿಗೆ ತೆರೆಲಿ ತಮ್ಮನ್ನು ಮೆಚ್ಚಿಸಿಕೊಳ್ಳಲು ಮಕ್ಕಳ ಹೆಗಲು ಮುಟ್ಟಿದ್ದಾರೆ ಅಂತ ತಿಳಿಸಿದ್ರು . ಇನ್ನು ಈ ಸಂದರ್ಭದಲ್ಲಿ ಶಾಸಕ ಯು.ಟಿ ಖಾದರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*