ಕರಾವಳಿಯಲ್ಲಿ ಸದ್ದು ಮಾಡುತ್ತಿದೆ ಭಕ್ತಿ ಪ್ರದಾನ ’ಸಜೀಪದ ಸತ್ಯೋಲು’ ತುಳು ಭಕ್ತಿಗೀತೆ

ಇತ್ತೀಚಿನ ದಿನಗಳಲ್ಲಿ ಆಲ್ಭಂ ಸಾಂಗ್ ರಿಲೀಸ್ ಮಾಡೋದು ಒಮದು ಟ್ರೆಂಡ್ ಆಗಿದೆ. ಹೊಸ ಹೊಸ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಇದು ಉತ್ತಮ ವೇದಿಕೆಯಾಗಿದ್ದು, ಸಾಮಾಜಿಕಜಾಲತಾಣ ಇದಕ್ಕೆ ಬೆಂಬಲ ನೀಡುತ್ತಿದೆ.ಇನ್ನೊಂದೆಡೆ ಹಿಪಾಪ್ , ರೊಮ್ಯಾಂಟಿಕ್ ಆಡಿಯೋ ಸಾಂಗ್‌ಗಳ ನಡುವೆ .ಭಕ್ತಿ ಪ್ರದಾನವಾದ ಆಡಿಯೋ ಸಾಂಗೊಂದು ಕರಾವಳಿಯಲ್ಲಿ ಸದ್ದು ಮಾಡುತ್ತಿದೆ. ಕರಾವಳಿಗರೇ ಸೇರಿ ಮಾಡಿರೋ ’ಸಜೀಪದ ಸತ್ಯೋಲು’ ಎಂಬ ತುಳು ಭಕ್ತಿ ಗೀತೆಯ ಆಡಿಯೋ ಇಂದು ಬಿಡುಗಡೆಗೊಂಡಿದೆ. ಹೌದು ಇಂದುಬಂಟ್ವಾಳ ತಾಲೂಕಿನ ಸಜೀಪನಡು ನಾಲ್ಕೈತ್ತಾಯ ದೈವಸ್ಥಾನದಲ್ಲಿಅದ್ದೂರಿಯಾಗಿ ಆಡಿಯೋ ರಿಲೀಸ್ ಆಗಿದ್ದು; ನಾಲ್ಕೈತ್ತಾಯ ದೈವಸ್ಥಾನದ ಅರ್ಚಕ ಶಂಕರ ಯಾನೆ ಕೊಚ ಪೂಜಾರಿ ಹಾಗೂ ರಕ್ಷಣ್ ಮಾಡೂರು ಬಿಡುಗಡೆಗೊಳಿಸಿದರು.ಇನ್ನು ಈ ಕಾರ್ಯಕ್ರಮದಲ್ಲಿ ಕೃತಿಕಾ ಪಾಣೆರ್, ಸಂತೋಷ್ ಬೆಂಕ್ಯೆ, ಹೇಮಂತ್ ಕೈರಂಗಳ, ಹರಿಪ್ರಸಾದ್ ತುಂಬೆ, ಚಂದ್ರಹಾಸ ಬಿ.ವರ್ಕಾಡಿ, ಎ.ಕೆ.ಕಂಚಿಲ, ಅಕ್ಷತಾ ಸಜೀಪ, ಜಿತೇಶ್ ಶೆಟ್ಟಿ ಹಾಗೂ ಉದ್ಯಮಿ ಸುರೇಂದ್ರ ಕರ್ಕೇರಾ ಇನೋಳಿ ಉಪಸ್ಥಿತರಿದ್ದರು.

 

1 Comment

Leave a Reply

Your email address will not be published.


*