ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರ್ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ; ವೃತ್ತಿಪರ ಶಿಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ

ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಸಾಕಷ್ಟು ಪಂದ್ಯಾವಳಿಯನ್ನು ಆಯೋಜನೆ ಮಾಡೋದರ ಮೂಲಕ ಕ್ರೀಡಾಭಿಮಾನಿಗಳ ಮನಸ್ಸನ್ನು ಸೆಳೆಯುವಂತೆ ಮಾಡಿದೆ. ಪ್ರತಿಸಲ ಒಂದೊಂದು ರಂಗಕ್ಕೆ ಪಂದ್ಯ ಆಯೋಜನೆ ಮಾಡೋದರ ಮೂಲಕ ಕೀಡೆ ಹಾಗೂ ಕ್ರೀಡಾಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಮುತುವರ್ಜಿ ವಹಿಸಿದೆ .ಅದರಂತೆ ಈ ಬಾರಿ ವೃತ್ತಿಪರ ಶಿಕ್ಷಕರಿಗಾಗಿ ಅಂತರ್‌ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿದ್ದು ಭಾಗವಹಿಸಿದ ಎಲ್ಲಾ ಶಿಕ್ಷಕ ಶಿಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಆ೧೮ ರಂದು ಈ ಪಂದ್ಯಾವಳಿ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜರುಗಿದ್ದು ಸುಮಾರು ೪೮ ಶಿಕ್ಷಕರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ .ಇನ್ನು ಪಂದ್ಯಾವಳಿಗೂ ಮುನ್ನ ಉದ್ಘಾಟನಾ ಸಮಾರಂಭ ಜರುಗಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ನಿರ್ದೇಶಕ ಡಾ. ಕಿಶೋರ್ ಕುಮಾರ್ , ವಿದ್ಯಾ ರಶ್ಮಿ ಸ್ಕೂಲ್ ಸವಣೂರಿನ ಮ್ಯಾನೇಜಿಂಗ್ ಡೈರೆಕ್ಟರ್ ಅಶ್ವಿನ್ ಶೆಟ್ಟಿ, ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ, ಸ್ಪೋರ್ಟ್ಸ್ ಡೆನ್ ಈವೆಂಟ್‌ನ ರೂವಾರಿ ಗಣೇಶ್ ಕಾಮತ್ , ಬ್ಯಾಡ್ಮಿಂಟನ್ ಕೋಚ್ ಸಂತೋಷ್ ಖಾರ್ವಿ, ಮ್ಯಾನೇಜರ್ ಕೆ.ಪಿ ಸತೀಶ್ , ರಾಘವೇಂದ್ರ , ಕಾರ್ತಿಕ್ ಹಾಗೂ ಸಂಪತ್ ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*