ಪಂಚಾಯತ್ ಅಧಿಕಾರಿಗಳ ಜೊತೆ ವಿವಿಧ ಸವಲತ್ತುಗಳ ಬಗ್ಗೆ ಚರ್ಚೆ ನಡೆಸಿದ ಮಾಜಿ ಸಚಿವ ಯು.ಟಿ.ಕೆ

ಇಂದು ಮಾಜಿ ಸಚಿವ ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ ಖಾದರ್ ನೇತೃತ್ವದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಕಛೇರಿಯಲ್ಲಿ ಸಭೆ ಜರುಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಮಾಜಿ ಸಚಿವರು ಕರೆದಿದ್ದು, ಸಭೆಯಲ್ಲಿ ವಿವಿಧ ಸವಲತ್ತುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇನ್ನು ಓಈ ಸಭೆಯನ್ನುದ್ದೇಶಿಸಿ ಮಾತನಾಡಿದ ಯು.ಟಿಖಾದರ್, ಸರಕಾರದ ಪ್ರತಿಯೊಂದು ಸವಲತ್ತುಗಳನ್ನು ಮನೆಮನೆಗೆ ತಲುಪಿಸುವ ಜವಬ್ಧಾರಿ ಅಧಿಕಾರಿಗಳದ್ದು, ಅದನ್ನು ಸೂಕ್ತ ಸಮಯಕ್ಕೆ ತಲುಪಿಸಬೇಕು. ಮಳೆಗಾಲಕ್ಕೆ ಸಂಬಂಧಪಟ್ಟ ಕೆಲವೊಂದು ಅವಶ್ಯಕ ವಸ್ತುಗಳ ಪೂರೈಕೆ ಸರಿಯಾದ ಸಮಯಕ್ಕೆ ನಡೆಯಬೇಕು. ಇದರ ಜೊತೆ ಅದಕ್ಕಿರುವ ಅಡಚಣೆಗಳನ್ನು ಸರಿಪಡಿಸಬೇಕು. ಇನ್ನು ಗ್ರಾಮ ಪಂಚಾಯತ್ ನಿಟ್ಟಿನಲ್ಲಿ ಪೆಶ್ಸನ್ ಒದಗಿಸುವ ಕುರಿತು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು .ಈ ಸಂದರ್ಭದಲ್ಲಿ ,ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಕ್ಷೇತ್ರದ ತಾಲೂಕು ಪಂಚಾಯತ್ ಸದಸ್ಯರು , ವಿವಿಧ ಗ್ರಾಮಪಂಚಾಯತ್ ನಧ್ಯಕ್ಷರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*