ಮಂಗಳೂರಿನಲ್ಲಿ ಬಾಂಬ್ ದಾಳಿ ಎಚ್ಚರಿಕೆ ಹಿನ್ನಲೆ ; ಅನುಮಾನಸ್ಪದ ೮ ಜನರ ಬಂಧನ. ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪೋಲಿಸ್ ಆಯುಕ್ತರು

ಸ್ವಾತಂತ್ರ್ಯೋತ್ಸವದ ಹಿನ್ನಲೆ ಮಂಗಳೂರಿನಲ್ಲಿ ಬಾಂಬ್‌ದಾಳಿ ಎಚ್ಚರಿಕೆ ನೀಡಲಾಗಿತ್ತು .ಮಂಗಳೂರಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದು; ಮಂಗಳೂರಿನ ಬಂದರು , ಏರ್‌ಪೋರ್ಟ್ , ರೈಲ್ವೇ ಸ್ಟೇಷನ್ , ಬಸ್ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದು ಬಾಂಬ್ ಸ್ಕಾಡ್ , ಡಾಗ್ ಸ್ಕಾಡ್‌ನಿಂದ ಪರಿಶೀಲನೆ ನಡೆಸುತ್ತಿದ್ದು, ಇನ್ಫೋಸಿಸ್ , ಆಸ್ಪತ್ರೆ , ಸೇರಿದಂತೆ ವಿವಿಧೆಡೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ .ಇನ್ನು ಶುಕ್ರವಾರ ಮಂಗಳೂರಿನ ಪಂಪ್‌ವೆಲ್ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಿದ್ದು, ಪರಿಶೀಲನೆ ನಡೆಸಲು ಮುಂದಾದಾಗ ಕಾರಿನಲ್ಲಿದ್ದ ೮ ಜನ ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಿನ್ನಲೆ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದು, ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಕಮೀಷನರ್ ಡಾ. ಪಿ.ಎಸ್ ಹರ್ಷ ಮಹತ್ವದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಶುಕ್ರವಾರ ಕಾರಿನಲ್ಲಿದ್ದ ಒಂದು ತಂಡ ಕಾರ್‌ನಲ್ಲಿ ಭಾರತ ಸರಕಾರದ ನಕಲಿ ಫಲಕ ಅಳವಡಿಸಿರೋದು ಗಮನಕ್ಕೆ ಬಂದಿದೆ.ಇನ್ನು ಭಾರತ ಸರ್ಕಾರದ ಬೋರ್ಡ್ ಹಾಕಿ ಟಿಂಟ್ ಹಾಕಿದ ಕಾರು ಅದಾಗಿತ್ತು.ತಪಾಸಣೆಗೆ ಮುಂದಾದಾಗ ಕಾರಿನಲ್ಲಿದ್ದವರು ತಪ್ಪಿಸಲು ಯತ್ನಸಿದ್ದು ೮ ಆರೋಪಿಗಳನ್ನು ಸದ್ಯಕ್ಕೆ ಬಂದಿಸಿದ್ದೇವೆ.ಈ ತಂಡದ ನಟೋರಿಯಸ್ ಲೀಡರ್ ಕೇರಳ ಮೂಲದ ಸ್ಯಾಮ್ ಪೀಠರ್ ಎಂದು ತಿಳಿದು ಬಂದಿದ್ದು, ಈತನಿಗೆ ಕೊಲ್ಕತ್ತಾ , ಭುವನೇಶ್ವರ ಸೇರಿ ಹಲವೆಡೆ ಈತನಿಗೆ ಸಂಪರ್ಕವಿದೆ.ಅಷ್ಟು ಮಾತ್ರವಲ್ಲದೆ ಈ ನಟೋರಿಯಸ್ ಗ್ಯಾಂಗ್‌ಗೆ ಸರ್ಕಾರಿ ಅಧಿಕಾರಿಗಳ ಥರ ೫ ಗನ್ ಮ್ಯಾನ್ ಇದ್ದಾರೆ. ಇನ್ನು ಆರೋಪಿ ಜೊತೆ ೫ ಜನರನ್ನು ವಶಕ್ಕೆ ಪಡೆದಿದ್ದು ,ಜೊತೆಗೆ ಇವರಿಗೆ ನೆರವು ನೀಡಿದ ಲತೀಫ್ ಮತ್ತು ಚೆರಿಯನ್ ಎಂಬ ಮಂಗಳೂರು ನಿವಾಸಿಗಳನ್ನು ಬಂಧಿಸಲಾಗಿದೆ. ಇನ್ನು ಬಂಧಿತರಿಂದ ಒಂದು ರಿವಾಲ್ವಾರ್, ೮ ಗುಂಡುಗಳು, ಏರ್ ಗನ್ ವಶಕ್ಕೆ ಪಡೆಯಲಾಗಿದೆ. ಮೇಲ್ನೋಟಕ್ಕೆ ಇವರು ಅಂತರಾಜ್ಯ ವಂಚನಾ ಜಾಲ ಎನ್ನುವುದು

ಗೊತ್ತಾಗಿದ್ದು; ಕೇಂದ್ರ ಸರ್ಕಾರದ ಅಧಿಕಾರಿಗಳ ಹೆಸರಿನಲ್ಲಿ ವಂಚಿಸುತ್ತಿದ್ದರು. ಇನ್ನು ಬಂಧಿತು ಸ್ಯಾಮ್ ಪೀಠರ್, ಮದನ್, ಸುನಿಲ್ ರಾಜ್, ಕೋದಂಡರಾಮ, ಟಿ.ಕೆ.ಬೋಪಣ್ಣ, ಚಿನ್ನಪ್ಪ, ಚೆರಿಯನ್ ಮತ್ತು ಅಬ್ದುಲ್ ಲತೀಫ್ ಆಗಿದ್ದು; ಇವರ ಹಾಗೂ ಇದರ ಜಾಲದ ಬಗ್ಗೆ ಸಮಗ್ರ ತನಿಖೆಗೆ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ ಅಂತ ಮಾಹಿತಿ ಹೊರಹಾಕಿದ್ದಾರೆ

Be the first to comment

Leave a Reply

Your email address will not be published.


*