ಅರಣ್ಯ ಸಚಿವರಾಗಿದ್ದಾಗ ೧೩೦ ಕ್ರೀಡಾಪಟುಗಳನ್ನು ನೇಮಕ ಮಾಡಿದ್ದೇನೆ ; ವರ್ಷಂಪತ್ರಿ ಒಂದೊಂದು ಗ್ರಾಮದಲ್ಲಿ ಕಬ್ಬಡ್ಡಿ ಕ್ರೀಡೆ ಆಯೋಜಿಸುತ್ತಿದ್ದೇನೆ- ಮಾಜಿ ಸಚಿವ ರೈ

೭೩ನೇ ಸ್ವತಂತ್ರ್ಯೋತ್ಸವದ ಪ್ರಯುಕ್ತ ಇಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಸ್ಪೋರ್ಟ್ಸ್ ಪ್ರಮೋಟರ್‍ಸ್ ಕ್ಲಬ್ ರಿ. ಮತ್ತು ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ , ದ.ಕ ಜಿಲ್ಲಾ ಮತ್ತು ಮಂಗಳೂರು ತಾಲೂಕು ಅಮೆಚೂರು ಕಬ್ಬಡ್ಡಿ ಅಸೋಸಿಯೇಷನ್ (ರಿ) ಇವರ ಸಹಕಾರದೊಂದಿಗೆ ಪ್ರೌಢ ಶಾಲಾಮತ್ತು ಪದವಿ ಪೂರ್ವ ಬಾಲಕ – ಬಾಲಕಿಯರ ಇಂಡಿಪೆಂಡೆನ್ಸ್ ಡೇ ಕಪ್ ಪ್ರೋ ಕಬ್ಬಡ್ಡಿ ೨೦೧೯ ೨ ದಿವಸ ನಡೆಯುತ್ತಿದೆ. ಇದರ ಅಂಗವಾಗಿ ಇಂದು ಉದ್ಘಾಟನಾ ಕಾರ್ಯಕ್ರಮ ಜರುಗಿದ್ದು,ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಭಾಗಿಯಾಗಿದ್ದಾರೆ .ಇನ್ನು ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರೈ , ಇವತ್ತು ನಮ್ಮ ಜಿಲ್ಲೆಯಲ್ಲಿ ಪ್ರೋ ಕಬ್ಬಡ್ಡಿ ಆಟಗಾರರು ಉತ್ತಮ ಆಟವನ್ನು ಆಡಿ ಜಿಲ್ಲೆಗೆ ಹೆಸರು ತಂದು ಕೊಟ್ಟಿದ್ದಾರೆ.ನಾನು ಅರಣ್ಯ ಸಚಿವರಾಗಿದ್ದಾಗ ಅರಣ್ಯ ಇಲಾಖೆಯಲ್ಲಿ ಕ್ರೀಡಾಪಟುಗಳನ್ನು ನೇಮಕ ಮಾಡಬೇಕೆಂದು ಹೇಳಿ ಅಪೇಕ್ಷೆ ಪಟ್ಟು ೧೩೦ ಜನರ ನೇಮಕಾತಿಯನ್ನು ಮಾಡಿದ್ದೇನೆಂದು ತಿಳಿಸಿದ್ರುಅದರಲ್ಲಿ ಕಬ್ಬಡ್ಡಿ ಕ್ರೀಡಾಪಟುಗಳು ಇದ್ದಾರೆ ಅನ್ನೋದು ಖುಷಿಯ ಸಂಗತಿ.ಜೊತೆಗೆ ಕಬ್ಬಡ್ಡಿ ಕ್ರೀಡಾಪಟುಗಳಿಗೆ ನನ್ನಿಂದಾದ ಸಹಾಯವನ್ನು ಮಾಡುತ್ತಾ ಬಂದಿದ್ದೇನೆಂದು ತಿಳಿಸಿದ್ರು.ಜೊತೆಗೆ ತನ್ನ ಮನೆಯ ಅಂಗಳದಲ್ಲೇ ಕಬ್ಬಡ್ಡಿ ಟೂರ್ನಮೆಂಟ್ ಮಾಡೋದರ ಮೂಲಕ ಕಬ್ಬಡ್ಡಿ ಆಟಗಾರರನ್ನು ಪ್ರೋತ್ಸಾಹಿಸಿದ್ದೇನೆಂದು ಹೇಳಿದ್ದಾರೆ.ಪ್ರತಿ ವರ್ಷವೂ ಒಂದೊಂದು ಗ್ರಾಮದಲ್ಲಿ ಕಬ್ಬಡ್ಡಿ ಆಟವನ್ನು ಇಡೋದರ ಮೂಲಕ ಆಟಗಾರರನ್ನು ಬೆಳಸುವ ಪ್ರಯತ್ನ ನಡೆಸಿದ್ದೇನೆಂದು ತಿಳಿಸಿದ್ರು.

Be the first to comment

Leave a Reply

Your email address will not be published.


*