ಸಂತ್ರಸ್ತರ ಸಂಕಟದಲ್ಲಿ ಒಗ್ಗಟ್ಟಾದ ಮಾನವೀಯತೆ

ಅದೆಷ್ಟೋ ಜಾತಿ‌, ಮತ, ಧರ್ಮ ಎನ್ನುವ ವಿಷ ಬೀಜ ಬಿತ್ತಲ್ಲಿ ಹೆಮ್ಮರವಾಗುವುದು ಮಾತ್ರ ಮಾನವೀಯತೆ ಎನ್ನುವ ವೃಕ್ಷ. ವರುಣನ ಆರ್ಭಟಕ್ಕೆ ನಲುಗಿದ ಕರ್ನಾಟಕಕ್ಕೆ ದಕ್ಷಿಣದಿಂದ ಉತ್ತರದ ಒರೆಗೂ ಸಂಪರ್ಕವೆ ಮನುಷ್ಯತ್ವ. ನೆರೆಯಿಂದಾಗಿ ಅಸ್ತಿತ್ವ ಕಳೆದುಕೊಂಡವರಿಗಾಗಿ ಮಿಡಿಯಿತು ಮಾನವೀಯ ಹೃದಯಗಳು.ಉತ್ತರ ಕರ್ನಾಟಕದ ಜನತೆಯ ಬಾಳು ಮತ್ತೆ ಕಟ್ಟಲು ಅಳಿಲು ಸೇವೆ ಮಾಡಲು‌ ಮಂಗಳೂರು ಜೆಪ್ಪುವಿನ ಅಲ್ ಸಾದ್ ವೆಲ್ಫೇರ್ ಅಸೋಸಿಯೇಷನ್ (ರಿ) ಸಂಸ್ಥೆಯ ಧ್ಯೇಯ ವಾಕ್ಯದಂತೆ ನೊಂದವರ ಬಾಳಿಗೆ ಬೆಂಗಾವಲಾಗಲು ನಿಂತಿದೆ. ಪ್ರವಾಹ ಸಂತ್ರಸ್ತರ ನೆರವಿಗಾಗಿ ತಮ್ಮ ಕೈಲಾದ ಸಹಾಯ‌ ಮಾಡಿದೆ ಈ ಯುವಕರ ತಂಡ. ಅಲ್ ಸಾದ್ ತಂಡದ ವತಿಯಿಂದ ನೆರೆ ಸಂತ್ರಸ್ತರಿಗೆ ನೀಡುವ ಸಾಮಾಗ್ರಿಗಳನ್ನು ತಲುಪಿಸುವ ಕಾರ್ಯ ಮಾಡಿದೆ. ದೇಹದಲ್ಲಿ ಹರಿಯುವ ನೆತ್ತರ ಬಣ್ಣ ಜಾತಿಗೊಂದರಂತೆ ಬದಲಾಗಲ್ಲ.ಎಲ್ಲರಲ್ಲೂ ‌ಮಾನವೀಯ ಹೃದಯವಿದೆ.ಆಚರ ವಿಚಾರಗಳು ಬದಲಾದರೂ ನಾವೆಲ್ಲರೂ ‌ಮನುಜರು ಎನ್ನುವುದು ‌ಮತ್ತೊಮ್ಮೆ ಇಲ್ಲಿ ಸಾಬೀತಾಯಿತು.

 

Be the first to comment

Leave a Reply

Your email address will not be published.


*