ಎಸ್. ಎಸ್. ಎಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸ್ಯೆಬೋ ಅದೀನದಲ್ಲಿ ೧೦೦ನೇ ರಕ್ತದಾನ ಶಿಬಿರ

ಆಗಸ್ಟ್ ೧೮ರಂದು ಎಸ್ ಎಸ್ ಎಫ್ ತಂಡದಿಂದ ೧೦೦ನೇ ರಕ್ತದಾನ ಶಿಬಿರ ಜರುಗಲಿದೆ. ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸ್ಯೆಬೋ ಅದೀನದಲ್ಲಿ ಕಾರ್ಯಕ್ರಮ ಜರುಗಲಿದ್ದು .ಮಂಗಳೂರಿನ ಪುರಭವನದಲ್ಲಿ ಭಾನುವಾರ ಈ ೧೦೦ ನೇ ಬೃಹತ್ ರಕ್ತದಾನ ಶಿಬಿರ ನಡೆಯಲಿದ್ದು, ಈ ನಿಟ್ಟಿನಲ್ಲಿ ಶುಕ್ರವಾರ ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಜರುಗಿದೆ. ಈ ಸಂದರ್ಭದಲ್ಲಿ ಪತ್ರಿಕಾಮಿತ್ರರನ್ನು ಉದ್ದೇಶಿಸಿ ಮಾತನಾಡಿದ ದ.ಕ ಜಿಲ್ಲಾ ಎಸ್‌ಎಸ್‌ಎಫ್ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ,ಎಸ್. ಎಸ್. ಎಫ್ ತಂಡವು ರಕ್ತದಾನಿಗಳ ಒಂದು ದಂಡನ್ನೇ ಕಟ್ಟಿಕೊಂಡಿದೆ. ಮಾತ್ರವಲ್ಲದೆ ಎರಡು ದಶಕಗಳಲ್ಲಿ ಸಾವಿರಾರು ಅಮಾಯಕ ಬಡಜೀವಗಳಿಗೆ ಅಮೂಲ್ಯವಾದ ರಕ್ತದಾನವನ್ನು ಮಾಡಿ ಹಲವು ಜೀವಗಳನ್ನು ಕಾಪಾಡಿದೆ. ಅಂದಹಾಗೆ ಈ ಎಸ್.ಎಸ್.ಎಫ್ ನಬ್ಲಡ್ ಸ್ಯೆಬೋ ಎರಡು ವರುಷಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದು, ಪ್ರತಿಯೊಬ್ಬರಿಗೂ ಮಾದರಿಯಾಗುತ್ತಿದೆ. ಇನ್ನು ಈ ೧೦೦ನೇ ರಕ್ತದಾನ ಶಿಬಿರಕ್ಕೆ ಎಸ್.ಎಸ್.ಎಫ್‌ನ ದ.ಕ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ರಾಜ್ಯಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಿ.ಟಿ.ಎಂ ತಂಙಳ್ , ಭಾಗವಹಿಸಲಿದ್ದಾರೆ . ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ರಮಾನಾಥ ರೈ, ಮಾಜಿ ಸಚಿವ ಯು.ಟಿ ಖಾದರ್ , ಶಾಸಕ ವೇದವ್ಯಾಸ್ ಕಾಮತ್, ಯ.ಟಿ ಇಫ್ತಿಕಾರ್ ಅಲಿ, ಮೇಯರ್ , ಬಾಸ್ಕರ್ ಮೊಯ್ಲಿ, ಮುಂಆತಾದವರು ಉಪಸ್ಥಿತಿಯಲ್ಲಿರಲಿದ್ದಾರೆ.

 

Be the first to comment

Leave a Reply

Your email address will not be published.


*