ಆ.೧೮ಕ್ಕೆ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಿಕ್ಷಕರಿಗಾಗಿ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್.. ಹೆಸರೇ ಹೇಳುವ ಹಾಗೆ ಕ್ರೀಡಾ ಜಗತ್ತಿನ ಉತ್ತುಂಗದ ಪಥದಲ್ಲಿರೋ ಸಂಸ್ಥೆಯಿದು . ಹೆಸರಿಗೆ ತಕ್ಕಂತೆ ಈ ಸಂಸ್ಥೆ ಕ್ರೀಡಾಭಿಮಾನಿಗಳ ಪಾಲಿನ ಕಲಿಕಾ ಶಾಲೆ. ಹೌದು ಮಂಗಳೂರಿನ ಹಳೆಯಂಗಡಿ ಬಳಿಯಲ್ಲಿರುವ ಈ ಟಾರ್ಪೋಡೋಸ್ ಸ್ಪೋರ್ಟ್ಸ್‌ಕ್ಲಬ್ ಈಗಾಗಲೇ ಹಲವು ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೀವನವನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ಕ್ರೀಡೆಯನ್ನು ಅಭ್ಯಾಸ ಮಾಡಿದ ಹಲವು ಮಕ್ಕಳು ಇಂದು ರಾಜ್ಯ ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.ಅಷ್ಟರಮಟ್ಟಿಗೆ ಈ ಸಂಸ್ಥೆ ತರಭೇತಿಯನ್ನು ನೀಡುತ್ತಿದೆ. ಅಂದಹಾಗೆ ಇಲ್ಲಿ ತರಭೇತಿ ನೀಡುವ ತರಭೇತುದಾರರೂ ಕೂಡ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳ ಜೊತೆ ಹೆಸರನ್ನು ಗಳಿಸಿದವರು. ಇಷ್ಟಕ್ಕೆ ಈ ಸಂಸ್ಥೆ ಕೈಕಟ್ಟಿ ಕೂತಿಲ್ಲ. ಬದಲಾಗಿ ಮಕ್ಕಳ ಜೊತೆ , ಯುವಜನಾಂಗಕ್ಕೂ ಪ್ರೇರಣೆಯಾಗಿದೆ. ಕ್ರೀಡಾಸಕ್ತರನ್ನು ಗುರುತಿಸಿ ಅವರಿಗೆ ಹಲವು ಪಂದ್ಯಾವಳಿಗಳನ್ನು ಆಯೋಜಿಸುತ್ತಲೇ ಈ ಸಂಸ್ಥೆ ಬಂದಿದೆ. ಈಗಾಗಲೇ ಇಂಜಿನಿಯರ್‍ಸ್, ಡಾಕ್ಟರ್‍ಸ್, ಲೋಯರ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಪಂದ್ಯಾವಳಿಯನ್ನು ಆಯೋಜಿಸಿದ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ., ಈ ಬಾರಿ ಜೀವನ ರೂಪಿಸೋ ಶಿಕ್ಷಕರಿಗಾಗಿ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಿದೆ.. ಇದೇ ಆಗಸ್ಟ್ ೧೮ ರಂದು ಪಂದ್ಯಾವಳಿ ನಡೆಯಲಿದ್ದು ಓಪನ್ ಮೆನ್ಸ್ ಸಿಂಗಲ್ಸ್ ಹಾಗೂ ಡಬಲ್ಸ್ ಜೊತೆಗೆ ಮಹಿಳಾ ಶಿಕ್ಷಕರಿಗಾಗಿ ಓಪನ್ ವುಮೆನ್ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಇನ್ನು ಪಂದ್ಯಾವಳಿ ಗೆದ್ದ ಶಿಕ್ಷಕ -ಶಿಕ್ಷಕಿಯರಿಗೆ ಆಕರ್ಷಕ ಬಹುಮಾನವನ್ನು ಸಂಸ್ಥೆ ನೀಡಲಿದೆ. ಒಟ್ಟಾರೆ . ಈ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾಗಿರೋ ಶ್ರೀ ಗೌತಮ್ ಶೆಟ್ಟಿ ಕೂಡ ಒಬ್ಬ ಶಿಕ್ಷಕರಾಗಿದ್ದು; ಅದಕ್ಕಿಂತ ಹೆಚ್ಚಾಗಿ ಈಗಾಗಲೇ ಕ್ರೀಡಾ ಜಗತ್ತಿನಲ್ಲಿ ಹೆಸರು ಮಾಡಿರೊ ಕ್ರೀಡಾಪಟು ಅನ್ನುವಂತದ್ದು ಖುಷಿಯ ಸಂಗತಿ .

 

Be the first to comment

Leave a Reply

Your email address will not be published.


*