ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ವತಿಯಿಂದ ಯಶಸ್ವಿ ಬ್ರಹತ್ ರಕ್ತದಾನ ಶಿಬಿರ

ತಾ|| 15-08-2019 ರಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಎರಡು ಬ್ರಹತ್ ರಕ್ತದಾನ ಶಿಬಿರವು ಬಹಳ ವಿಜೃಂಭಣೆಯಿಂದ ಯಶಸ್ವಿಯಾಯಿತು. ಸಫರ್ ಸ್ಪೋರ್ಟ್ಸ್ & ಕಲ್ಚರಲ್ ಎಷೋಷಿಯೇಷನ್(ರಿ) ರವರ ಸಹಕಾರದಿಂದ ಹಾಗೂ ಯಾನಪ್ಪೋಯ ಆಸ್ಪತ್ರೆಯ ಸಹಯೋಗದೊಂದಿಗೆ ಉಳ್ಳಾಲದ ಮಂಚಿಲದಲ್ಲಿ ಒಂದು ಶಿಬಿರ ನಡೆದರೆ, ಇನ್ನೊಂದು ಶಿಬಿರವು ಕುಂದಾಪುರದ ಕೊಡಿ ಪ್ರದೇಶದಲ್ಲಿ ಎನ್.ಎಮ್.ಎ ಪಾಲಿಕ್ಲಿನಿಕ್ ರವರ ಸಹಯೋಗದೊಂದಿಗೆ ವಿಜೃಂಭಣೆಯಿಂದ ನಡೆಯಿತು. ಉಳ್ಳಾಲದ ಕಾರ್ಯಕ್ರಮವು ಉಸ್ತಾದ್ ಮುಹಮ್ಮದ್ ಅಶ್ರಫ್ ಸಹದಿ ಯವರ ದುವಾದೊಂದಿಗೆ ಪ್ರಾರಂಭವಾಯಿತು. ಮಾಸ್ಟರ್ ಹಾಫಿಲ್ ಸುಲ್ತಾನ್ ನಬೀಲ್ರವರು ಕುರಾನ್ ಪಠಿಸಿದರು. ಚಂದ್ರಹಾಸ್ ಉಳ್ಳಾಲ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಯ್ಯುಬ್ ಉಳ್ಳಾಲ ಸ್ವಾಗತ ಮತ್ತು ಪ್ರಸ್ತಾವಿಕ ಬಾಷಣ ಗೈದರು. ಅಥಿತಿಗಳಾಗಿ ಫಾರೂಕ್ ಯು.ಎಚ್. ಇಸ್ಮಾಯಿಲ್ ಆಲಿಯಬ್ಬ, ಹಾಗೂ ಇನ್ನಿತರ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು. ಹಿರಿಯ ಐದು ಸದಸ್ಯರುಗಳಾದ ಯು ಎಚ್ ಇಲಿಯಾಸ್, ಯು ಎಚ್ ಹುಸೈನ್, ಕಾಸಿಂ ಅಶ್ರಫ್, ಮೆಲ್ವಿನ್ ಡಿಸೋಜ, ಅಶ್ರಫ್ ಅಬ್ಬಾಸ್ ಎಂಬವರನ್ನು ಸನ್ಮಾನಿಸಲಾಯಿತು. ಮುಸ್ತಫಾ ಯು ಕೆ ಯವರ ದನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕುಂದಾಪುರದ ಕೊಡಿಯಲ್ಲಿ NMA ಪಾಲಿಕ್ಲಿನಿಕ್ ರವರ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ ಉಸ್ತಾದ್ ಕೆ ಎಂ ಅಬ್ದುಲ್ ರಹಿಮಾನ್ ಸಖಾಫಿಯವರು ದುವಾದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ವಾಹಿರ್ ಹಸನ್ ಕುಂದಾಪುರ ವಹಿಸಿದರು. ಮುಖ್ಯ ಅತಿಥಿಗಳಾಗಿ, ಅಬ್ದುಲ್ ಸತ್ತಾರ್ ಕೋಟೇಶ್ವರ ಉದ್ಯಮಿ ಬಹರೈನ್, ಅಬ್ದುಲ್ ಬಷೀರ್ ಉದ್ಯಮಿ ಕುಂದಾಪುರ ಬಾಗವಹಿಸಿದ್ದರು. ಅಥಿತಿಗಳಾಗಿ ಫಯಾಝ್ ಅಲಿ ಬೈಂದೂರ್, ಸತ್ತಾರ್, ಪುತ್ತೂರ್, ಅಬ್ಬಾಸ್ ಕೊಡಿ, ಬಷೀರ್ ಕೃಷ್ಣಾಪುರ, ಸಲೀಂ ದೇರಳಕಟ್ಟೆ, ತೌಸೀಫ್ ಕೋಟೇಶ್ವರ, ತಜ್ವೀದ್ ಕೃಷ್ಣಾಪುರ, ಆರಿಫ್ ಬೆಂಗಳೂರು ಮುಂತಾದವರು ಬಾಗವಹಿಸಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಸತ್ತಾರ್ ಪುತ್ತೂರ್ ನೆರವೇರಿಸಿದರು. ಫಯಾಝ್ ಅಲಿ ಬೈಂದೂರ್ ಧನ್ಯವಾದಗೈದು ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

Be the first to comment

Leave a Reply

Your email address will not be published.


*