ಸಾರ್ವಜನಿಕ ರಕ್ತದಾನ ಶಿಬಿರಕ್ಕೆ ಶುಭ ಹಾರೈಸಿದ ಮಾಜಿ ಸಚಿವ ಯುಟಿ ಖಾದರ್

ಎಸ್ಎಸ್ಎಫ್ ದೇರಳಕಟ್ಟೆ ಸೆಕ್ಟರ್ ಮತ್ತು ಬೆಳ್ಮ ರೆಂಜಾಡಿ ಶಾಖೆ ವತಿಯಿಂದ ,ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ಸೇಬು ಹಾಗೂ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಜರುಗಿದೆ ಇದರ ಜೊತೆಗೆ ಇದೇ ಸಂದರ್ಭದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಕೂಡ ಜರುಗಿದೆ .ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾರ್ಥನೆಯನ್ನು ಕೆ ಬಿ ಜೆ ಎಂ ರೆಂಜಾಡಿ ಖತೀಬರಾದ ಬಹು ಆದಂ ಫೈಜಿ ,ಅಧ್ಯಕ್ಷತೆಯನ್ನು ಎಸ್ಎಸ್ಎಫ್ ದೇರಳಕಟ್ಟೆ ಸೆಕ್ಷನ್ ಅಧ್ಯಕ್ಷರಾದ ಜನಾಬ್ ಅಲ್ತಾಫ್ ಶಾಂತಿ ಭಾಗ್ವಹಿಸಿಕೊಂಡಿದ್ದಾರೆ .ಇನ್ನು ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಶಾಸಕರು ಮಾಜಿ ಸಚಿವರಾದ ಜನಾಬ್ ಯುಟಿ ಖಾದರ್ ನಡೆಸಿಕೊಟ್ಟಿದ್ದಾರೆ .ಇದೇ ಸಂದರ್ಭದಲ್ಲಿ ಮಾತನಾಡಿದ ಯುಟಿ ಖಾದರ್ ರಕ್ತದಾನ ಶಿಬಿರದಂತಹ ಒಳ್ಳೆಯ ಸೇವೆಯನ್ನು ಮಾಡ್ತಾ ಇರುವಂಥ ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ,ರಕ್ತದಾನ ದಾನಗಳಲ್ಲಿ ಶ್ರೇಷ್ಠದಾನ ಅಂತಾ ತಿಳಿಸಿದ್ರು .

Be the first to comment

Leave a Reply

Your email address will not be published.


*