ಎಂ ಸಿ ಎಚ್ ಪದವಿ ಪಡೆದು ಮಂಗಳೂರಿಗೆ ಹೆಸರು ತಂದ ಡಾ.ಮರಿಯಮ್ಮ ಅಂಜುಮ್ ಇಫ್ತಿಕಾರ್

ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ತಜ್ಞ ವೈದ್ಯ ಎಂಬ ಕೀರ್ತಿಗೆ ಡಾಕ್ಟರ್ ಮರಿಯಮ್ಮ ಅಂಜುಮ್ ಇಫ್ತಿಕಾರ್ ಪಾತ್ರರಾಗಿದ್ದಾರೆ .ಶಾಲಾ ದಿನಗಳಿಂದಲೇ ಬಹಳ ಚುರುಕಾಗಿದ್ದ ಡಾಕ್ಟರ್ ಮರಿಯಮ್ಮ ತನ್ನ ಶೈಕ್ಷಣಿಕ ಬದುಕಿನುದ್ದಕ್ಕೂ ಮೆರಿಟ್ ಸೀಟುಗಳನ್ನು ಪಡೆಯುತ್ತಾ ಇದೀಗ ಮಹಿಳೆಯರಲ್ಲಿ ಕಂಡು ಬರುವ ವಿವಿಧ ಕ್ಯಾನ್ಸರ್ ಚಿಕಿತ್ಸೆ ಕುರಿತು ಕೊಚ್ಚಿಯಲ್ಲಿರುವ ಅಮೃತಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಉನ್ನತ ಅಧ್ಯಯನ ಮಾಡಿ ಇದೀಗ ಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಅತ್ಯುನ್ನತ ಪದವಿಯಾದ ಮಾಸ್ಟರ್ ಆಫ್ ಸರ್ಜರಿ ಪದವಿಯನ್ನು ಪಡೆದಿದ್ದಾರೆ .ಇವರು ಮಂಗಳೂರಿನ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜು ಯೆನಪೋಯ ಮೆಡಿಕಲ್ ಕಾಲೇಜು ಹಾಗೂ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯಲ್ಲಿ ಅಧ್ಯಯನವನ್ನು ಮಾಡಿ ವಿದೇಶದಲ್ಲೂ ಹೆಸರನ್ನು ಪಡೆದಿದ್ದಾರೆ .ಇದೀಗ ದೇಶ ವಿದೇಶಗಳ ವೈದ್ಯಕೀಯ ನಿಯತಕಾಲಿಕದಲ್ಲಿ ಇವರ ಅಧ್ಯಯನದ ಲೇಖನಗಳು ಪ್ರಕಟವಾಗಿದ್ದು ಉಪನ್ಯಾಸವನ್ನು ನೀಡಿದ್ದಾರೆ .ಮಂಗಳೂರಿನ ನಾಟಿ ಮೊಯ್ದಿನ್ ಕುಞಿ ದಂಪತಿಯ ಸುಪುತ್ರಿ ಹಾಗೂ ಎಎಸ್ ಮಾಣಿಪ್ಪಾಡಿ ಅವರ ಮೊಮ್ಮಗಳಾಗಿರುವ ಡಾಕ್ಟರ್ ಮರಿಯಮ್ಮ ಮಾಜಿ ಶಾಸಕ ದಿವಂಗತ ಯುಟಿ ಫರೀದ್ ಅವರ ಸೊಸೆಯಾಗಿದ್ದಾರೆ .ಇನ್ನು ಮಾಜಿ ಸಚಿವ ಯುಟಿ ಖಾದರ್ ಸೋದರ ರಾಜೀವ್ ಗಾಂಧಿ ವೈದ್ಯಕೀಯ ವಿವಿಯ ಸಿಂಡಿಕೇಟ್ ಸದಸ್ಯ ಡಾಕ್ಟರ್ ಯುಟಿ ಇಫ್ತಿಕಾರ್ ಅವರ ಪತ್ನಿ ಇವರಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ .ಇನ್ನು ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದ ವೈದ್ಯಕೀಯ ವಿಚಾರಗೋಷ್ಠಿಯಲ್ಲಿ ತಮ್ಮ ಪ್ರಬಂಧ ಮಂಡಿಸಿದ ಡಾಕ್ಟರ್ ಮರಿಯಮ್ಮ ಅವರಿಗೆ ಬ್ರೆಜಿಲ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವೈದ್ಯಕೀಯ ಸಮಾವೇಶದಲ್ಲಿ ಭಾಗವಹಿಸಲು ವಿದ್ಯಾರ್ಥಿ ವೇತನ ಸಹಿತ ಆಹ್ವಾನ ಬಂದಿದೆ .ಒಟ್ಟಾರೆ ಮಂಗಳೂರು ಮೂಲದ ಈ ವೈದ್ಯೆ ದೇಶ ವಿದೇಶಗಳಲ್ಲೂ ಹೆಸರು ಮಾಡಿದ್ದು ಮಂಗಳೂರಿಗೆ ಹೆಸರನ್ನು ತಂದುಕೊಟ್ಟಿದ್ದಾರೆ.

 

Be the first to comment

Leave a Reply

Your email address will not be published.


*