ಆಂಗ್ಲ ಮಾಧ್ಯಮವನ್ನು ಉದ್ಘಾಟಿಸಿ ಇಂಗ್ಲಿಷ್ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ ಮಾಜಿ ಸಚಿವ ಯುಟಿ ಖಾದರ್

ಇಂದು ನಾಡಿನೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ .ಈ ಹಿನ್ನೆಲೆ ಮಾಜಿ ಸಚಿವ ಯುಟಿ ಖಾದರ್ ಉಳ್ಳಾಲ ಕ್ಷೇತ್ರದ ಕೆಲವೊಂದು ಶಾಲೆಗಳಿಗೆ ಭೇಟಿ ನೀಡಿ ಆಂಗ್ಲ ಮಾಧ್ಯಮ ಶಾಲೆಯನ್ನು ಉದ್ಘಾಟನೆ ಮಾಡಿದ್ದಾರೆ .ಈ ಹಿನ್ನೆಲೆ ಬಂಟ್ವಾಳ ಕ್ಷೇತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೂಹಾಕುವ ಕಲ್ಲು ಇಲ್ಲಿಯ ಆಂಗ್ಲ ಮಾಧ್ಯಮ ಶಾಲೆಯನ್ನು ಉದ್ಘಾಟನೆಗೊಳಿಸಿ ಸರಕಾರಿ ಶಾಲೆಯಲ್ಲೂ ಇಂಗ್ಲಿಷ್ ವಿದ್ಯಾಭ್ಯಾಸದ ಕುರಿತು ಮಾತನಾಡಿದ್ದಾರೆ .ಮುಂದಿನ ಯುಗದಲ್ಲಿ ಎಲ್ಲಾ ಭಾಷೆಗಳು ಮಕ್ಕಳಿಗೆ ಗೊತ್ತಿರಬೇಕು ಅದರಲ್ಲೂ ಇಂಗ್ಲಿಷ್ ಕಡ್ಡಾಯವಾಗಿ ಬೇಕಾಗುತ್ತದೆ ಅದನ್ನು ಕಲಿಯಲೇ ಬೇಕು ಅಂತ ತಿಳಿಸಿದರು .ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ ,ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಗಟ್ಟಿ ,ಶಾಲಾಭಿವೃದ್ಧಿಯ ಅಧ್ಯಕ್ಷರಾದ ರಮೇಶ್ ,ಹಿರಿಯರಾದ ರಾಜಗೋಪಾಲ್ ಭಟ್ ,ಹಿರಿಯರಾದ ಸುನೀಲ್ ,ಸೇರಿದಂತೆ ಹಲವರು ಭಾಗಿಯಾಗಿದ್ದರು

 

Be the first to comment

Leave a Reply

Your email address will not be published.


*