ದೇಶದ ಸೇವೆಗೆ ಸದಾ ಸಿದ್ಧರಾಗೋಣ ; ಕ್ಲಾಸಿಕ್ ಹಾರ್ಮನಿ ಆಂಡ್ ಸಿಂಫನಿ ಅಪಾರ್ಟ್ಮೆಂಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ದೇಶದೆಲ್ಲೆಡೆ ೭೩ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದೆ. ಬಂದರು ನಗರಿಯಲ್ಲೂ ಸ್ವಾತಂತ್ರ್ಯ ದಿನದ ಸಂಭ್ರಮ ಮೊಳಗಿದೆ.ಇಂದು ೭೩ನೇ ಸ್ವಾತಂತ್ರ್ಯೋತ್ಸವದ ಸಮಾರಂಭವನ್ನು ನಗರದ ಕಂಕನಾಡಿಯ ಕ್ಲಾಸಿಕ್ ಹಾರ್ಮನಿ ಆಂಡ್ ಸಿಂಫನಿ ಅಪಾರ್ಟ್ಮೆಂಟ್ ನಲ್ಲಿ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಜಿಮ್ ಡ್ಯಾನಿಲ್ ಮಾತನಾಡಿ ಸ್ವಾತಂತ್ರ್ಯ ವಿಲ್ಲದ ಜೀವನ ಆತ್ಮವಿಲ್ಲದ ದೇಹದಂತೆ.ಇಂದು ನಾವೆಲ್ಲರೂ ಸ್ವಾತಂತ್ರ್ಯರಾಗಿಲು ಕಾರಣ ನಮ್ಮ ಹಿಂದಿನ ನಾಯಕರು ಎಂದು ಮೆಲುಕಿಸಿಕೊಂಡರು. ಖತೀಬ್ ಅಬ್ದುರ್ ರಹಮಾನ್ ಸಾದಿ ಮಾತನಾಡಿ ನಾವೆಲ್ಲರೂ ಭಾರತಾಂಬೆಯ ಮಕ್ಕಳು.ಸ್ವಾತಂತ್ರ್ಯ ದಿನಾಚರಣೆಯ ಶುಭದಿನ ವಿವಿಧತೆಯಲ್ಲಿ ಏಕತೆಯನ್ನು ಸಾರಿ ಒಂದಾಗಿ ಬಾಳೋಣ ಎಂದು ಸಂದೇಶ ಸಾರಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಯುವ ಪತ್ರಕರ್ತೆ ಅಂಜುಮ್ ನಮ್ಮ ಕೆಲಸಗಳನ್ನು ಬದಿಗೊತ್ತಿ ದೇಶ ಸೇವೆಗೆ ಸದಾ ಸಿದ್ಧರಾಗಿ ಎಂದು ಕರೆ ನೀಡಿದರು.ನಮ್ಮ‌ಮಕ್ಕಳನ್ನು ಈ ದೇಶದ ಆಸ್ತಿಯನ್ನು ಮಾಡುವ ದೊಡ್ಡ ಜವಬ್ದಾರಿ ಹೆತ್ತವರ ಮೇಲಿದೆ.ಸ್ವಾತಂತ್ರ್ಯ ಬಂದು ೭೩ ವರ್ಷಗಳು ಕಳೆದರು ಈ ದಿನದ ಸಂಭ್ರಮ ೭೩ ವರ್ಷಗಳಿಂದಲು ಹೀಗೆ ಇದೆ ಎಂದರು. ಇನ್ನು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಪಾರ್ಟ್ಮೆಂಟ್ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.ಮುಖ್ಯ ಅತಿಥಿಗಳಾದ ಡಾ.ಜಿಮ್ ಡ್ಯಾನಿಲ್,ಜಾನಾಬ್ ಯೂಸುಫ್,ಯುವ ಪತ್ರಕರ್ತೆ ಅಂಜುಮ್ ಕಂಕನಾಡಿ ಜುಮ್ಮಾ ಮಸೀದಿ ಖತೀಫ್ ಅಬ್ದುರ್ ರಹಮಾನ್ ಸಾದಿ,ಅಬ್ದುಲ್ ಸ್ಯಾನಿವೇಟ್,ಬಿ ಹ್ಯೂಮನ್ ತಂಡದ ಸದಸ್ಯರು,ಕಾರ್ಪೊರೇಷನ್ ಬ್ಯಾಂಕ್ ಮ್ಯಾನೇಜರ್ ನಾಗರಾಜ್ ರವರಿಂದ ಧ್ವಜಾರೋಹಣ ನೆರವೇರಿಸಿದರು. ಬಿ ಹ್ಯೂಮನ್ ತಂಡದ ವತಿಯಿಂದ ಧ್ವಜಾರೋಹಣಕ್ಕೂ ಮೊದಲು ಬಹಳ ದಿನಗಳಿಂದ ಹಿರಿಯ ನಾಗರಿಕರಿಗೆ ಹಾಗೂ ರಸ್ತೆ ಸವಾರರಿಗೆ ತೊಂದರೆ‌ ಆಗುತ್ತಿದ್ದ ಕಂಕನಾಡಿ ಸಮೀಪದ ರಸ್ತೆಗಳ ಗುಂಡಿಗಳಿಗೆ ಮಣ್ಣು ತುಂಬಿಸಲಾಯಿತು. ರಾಷ್ಟ್ರ ಗೀತೆ ಹಾಡುವ ಮೂಲಕ ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅನೇಕ ಗಣ್ಯರು ಅರವಿಂದ,ರಹೀಮಾನ್ ಹಾಗೂ ಕ್ಲಾಸಿಕ್ ಅಪಾರ್ಟ್ಮೆಂಟ್ ‌ನ ಮೆಂಬರ್ಸ್ ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*