ಬಾಲಿಕಾ ಆಶ್ರಮದಲ್ಲಿ ಇಂದು 73ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮ ಆಚರಿಸಲಾಯಿತು

ಕಂಕನಾಡಿ ಸಮೀಪದ ಬಾಲಿಕಾ ಆಶ್ರಮದಲ್ಲಿ ಇಂದು 73ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿದ ವಿಧಾನ ಪರೊಷನ್ ವಿಪಕ್ಷ ಸದಸ್ಯರಾದ ಐವನ್ ಡಿಸೋಝಾ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿಸೋಝಾ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾರ್ಪಡಿಸುವುದೇ ದೇಶಕ್ಕೆ ನೀಡುವ ಬಹುದೊಡ್ಡ ಕೊಡುಗೆ.ಬಾಲಿಕಾ ಆಶ್ರಮ ಅದೆಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದು ನಾವೆಲ್ಲರೂ ಸತ್ಪ್ರಜೆಯಾಗಿ ರೂಪುಗೊಳ್ಳಬೇಕೆಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಕಾರ್ಪೋರೇಟರ್ ಆಶಾ ಡಿ’ಸಿಲ್ವಾ, ಆಶ್ರಿತ್,ಬಾಲಿಕಾ ಆಸ್ರಮದ ಮುಖ್ಯೋಪಾಧ್ಯಾಯಿನಿ, ಯುವ ಪತ್ರಕರ್ತೆ ಅಂಜುಮ್ ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*