ಅಧಿಕಾರಕ್ಕಾಗಿ ಕಾಂಗ್ರೆಸ್ ಸ್ಥಾಪನೆಯಾಗಿಲ್ಲ, ದುರ್ಬಲರಿಗೆ ಶಕ್ತಿಯಾಗಿದೆ ಕಾಂಗ್ರೆಸ್ – ಯು.ಟಿ ಖಾದರ್

ಇಂದು ಮಳೆಯ ನಡುವೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು .ಉಳ್ಳಾಲ ಕ್ಷೇತ್ರದ ತೊಕ್ಕೋಟುವಿನಲ್ಲೂ ಕೂಡ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಿದ್ದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದ್ದಾರೆ . ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ಯುಟಿ ಖಾದರ್ ಮಾತನಾಡಿದ್ದು ಕಾಂಗ್ರೆಸ್ ಪಕ್ಷ ಸ್ಥಾಪನೆಯಾಗಿದ್ದು ಕೇವಲ ಅಧಿಕಾರದ ಉದ್ದೇಶವನ್ನು ಇಟ್ಟುಕೊಂಡಲ್ಲ ಬದಲಾಗಿ ,ಕಾಂಗ್ರೆಸ್ ಒಂದು ಆಂದೋಲನ ಅದಕ್ಕಾಗಿ ಅದು ಸ್ಥಾಪನೆಯಾಗಿದೆ . ಹಿಂದಿನ ಕಾಲದಲ್ಲಿ ಬಲಿಷ್ಠ ವರ್ಗದವರಿಗೆ ಮಾತ್ರ ಎಲ್ಲಾ ಕೆಲಸ ಮಾಡುವಂಥ ಯೋಗ್ಯತೆ ಇತ್ತು ಬಡವರಿಗೆ, ಅಶಕ್ತರಿಗೆ, ದಲಿತರಿಗೆ ,ಕಾಲಿಗೆ ಚಪ್ಪಲಿ ಹಾಕಲು ಕೂಡ ಅವಕಾಶವಿರಲಿಲ್ಲ ಅಂಥವರ ಶಕ್ತಿಯಾಗಿ ಕಾಂಗ್ರೆಸ್ ಪಕ್ಷ ಹೊರಹೊಮ್ಮಿದೆ ಅಂತಾ ತಿಳಿಸಿದ್ರು . ನಂತರ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್ ಇತ್ತೀಚಿನ ದಿನಗಳಲ್ಲಿ ಅನ್ನದಾನ ಶಿಕ್ಷಣ ವ್ಯವಸ್ಥೆಗೆ ನಾವು ಮಾಡಿಕೊಡುವಂಥ ಅವಕಾಶ ಸಿಕ್ಕಿದೆ .ಆದರೆ ಈಗಿರುವಂತಹ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಅಂತ ತಿಳಿಸಿಕೊಟ್ಟರು.

 

Be the first to comment

Leave a Reply

Your email address will not be published.


*