ಎಸಿ ರೂಮಿನಲ್ಲಿ ಕೂರುವ ಅಧಿಕಾರಿಗಳು ವ್ಯಾಪಾರಸ್ಥರಿಂದ ಭಾರತ ದೇಶ ಬಲಿಷ್ಠವಾಗಿಲ್ಲ ;ಬದಲಾಗಿ ಶ್ರದ್ಧೆಯಿಂದ ಕ್ಲಾಸ್ ರೂಮಿನಲ್ಲಿ ಕೂತು ಕಲಿಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮಾತ್ರ ಭಾರತ ದೇಶ ಬಲಿಷ್ಠವಾಗಲು ಸಾಧ್ಯ -ಮಾಜಿ ಸಚಿವ ಯು.ಟಿ ಖಾದರ್

ಇಂದು 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಗೆಲ್ಲ ನಾಗರಿಕರಲ್ಲೂ ಮನೆ ಮಾಡಿದೆ .ಇತ್ತ ಮಾಜಿ ಸಚಿವ ಯುಟಿ ಖಾದರ್ ತಮ್ಮ ಕ್ಷೇತ್ರದ ಕೆಲವೊಂದು ಶಾಲೆಗಳಿಗೆ ಭೇಟಿ ನೀಡಿ ಧ್ವಜಾರೋಹಣವನ್ನು ನೆರವೇರಿಸಿದ್ದಾರೆ .ಅದರಂತೆ ಮಂಗಳೂರು ದಕ್ಷಿಣ ವಲಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಬ್ಲಮೊಗರುಗೆ ಭೇಟಿ ನೀಡಿ ಧ್ವಜಾರೋಹಣವನ್ನು ನೆರವೇರಿಸಿ ಜೊತೆಗೆ ಆಂಗ್ಲ ಮಾಧ್ಯಮ ಕೊಠಡಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ್ದಾರೆ. ಇವತ್ತು 73ನೇ ಸ್ವಾತಂತ್ರ್ಯ ದಿನಾಚರಣೆ ಆಂಗ್ಲ ಮಾಧ್ಯಮ ಶಾಲೆಯ ಕೊಠಡಿ ಉದ್ಘಾಟನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉಪಯೋಗವನ್ನು ಮಾಡಿಕೊಡುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಿಕೊಳ್ಳುತ್ತಿದ್ದೇವೆ .ಇನ್ನು ಮಂತ್ರಿಗಳು ಬಲಿಷ್ಠವಾದರೂ ಕೂಡ ಭಾರತ ದೇಶ ಬಲಿಷ್ಠವಾಗಲು ಸಾಧ್ಯವಿಲ್ಲ ಎಸಿ ರೂಮಿನಲ್ಲಿ ಕೂರುವ ಅಧಿಕಾರಿಗಳು ವ್ಯಾಪಾರಸ್ಥರು ಬಲಿಷ್ಠವಾಗುವುದು ಆದ್ರೆ ಭಾರತ ದೇಶ ಬಲಿಷ್ಠವಾಗಲು ಅದರಿಂದ ಸಾಧ್ಯವಾಗುವುದಿಲ್ಲ .ಭಾರತ ದೇಶ ಬಲಿಷ್ಠವಾಗಬೇಕಾದರೆ ಕ್ಲಾಸ್ ರೂಮಿನಲ್ಲಿ ಕುಳಿತು ಕಲಿಯುವ  ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಅಂತ ಮಾಜಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ .ಅದಕ್ಕಾಗಿಯೇ ಎಲ್ಲ ಸೌಲಭ್ಯಗಳನ್ನು ಮಾಡಿಕೊಡುವ ಉದ್ದೇಶ ಸರಕಾರದ್ದಾಗಿದೆ .ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪೋಷಕರ ಮಾತ್ರ ಆಸ್ತಿಯಲ್ಲ ಬದಲಾಗಿ ಸಮಾಜದ ಆಸ್ತಿ ಈ ನಿಟ್ಟಿನಲ್ಲಿ ಎಲ್ಲರೂ ಸೌಹಾರ್ದತೆಯಿಂದ ಉದಾರತೆಯಿಂದ ಹಾಗೂ ಒಳ್ಳೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಮಕ್ಕಳಿಗೆ ಸಂದೇಶವನ್ನು ಸಾರಿದರು .ಇನ್ನು ಈ ಸಂದರ್ಭದಲ್ಲಿ ಮಾಜಿ ಸಚಿವ ಯುಟಿ ಖಾದರ್ ನೇತೃತ್ವದಲ್ಲಿ ಎಲ್ಲ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆಯನ್ನು ಮಾಡಲಾಯಿತು. ಇದರ ಜೊತೆಯಲ್ಲಿ ಎಲ್ಲ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು .

 

 

Be the first to comment

Leave a Reply

Your email address will not be published.


*