ಮಾರ್ಗನ್ಸ್‌ಗೇಟ್ ಸ್ವಾತಂತ್ರೋತ್ಸವ ಸಮಿತಿಯಿಂದ ೭೩ನೇ ಸ್ವಾತಂತ್ರ್ಯೋತ್ಸವ. ಬಡವರಿಗೆ ಧನಸಹಾಯದ ಜೊತೆ ಹಿರಿಯ ಕಲಾವಿದರಿಗೆ ಸನ್ಮಾನ

ಇಂದು ದೇಶದೆಲ್ಲಡೆ ೭೩ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದು, ಇತ್ತ ಮಂಗಳೂರಿನಲ್ಲೂ ಪ್ರವಾಹದ ನಿಮಿತ್ತ ಬಹಳ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಇನ್ನು ೨೦೦೯ ನೇ ಇಸವಿಯಲ್ಲಿ ಸ್ಥಾಪನೆಗೊಂಡ ನಮ್ಮ ಸಮಿತಿಯು ಕಳೆದ ೧೦ ವರ್ಷಗಳಲ್ಲಿ ಧಾರ್ಮಿಕ , ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಗ್ರಾಮದ ಒಳ್ಳೆಯ ಕಾರ್ಯಗಳಲ್ಲಿ ಭಾಗವಹಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡಿರುವ ಮಾರ್ಗನ್ಸ್ ಗೇಟ್ ಸ್ವಾತಂತ್ರೋತ್ಸವ ಸಮಿತಿ ಇಂದು ೭೩ನೇ ಸ್ವಾತಂತ್ರೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಇನ್ನು ಇಂದು ಬೆಳಗ್ಗೆ ೧೦ ಗಂಟೆಗೆ ಸರಿಯಾಗಿ ಮಾರ್ಗನ್ಸ್‌ಗೇಟ್ ವೃತ್ತದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಿದ್ದು, ಧ್ವಜಾರೋಹಣವನ್ನು ಸಮಿತಿಯ ಸ್ಥಾಪಕ ಸದಸ್ಯರಾದ ಶ್ರೀ.ಬಿ. ಚಂದ್ರಶೇಖರ ಓಣಿಕೆರೆ ನೆರವೇರಿಸಿದ್ದಾರೆ. ಇನ್ನು ಅಧ್ಯಕ್ಷ ಸ್ಥಾನವನ್ನು ಅಳಪೆ ಕರ್ಮಾರ್ ವಹಿಸಿದ್ದು, ಸತ್ಸಂಗ ಸಮಿತಿಯ ಸಂಚಾಲಕರಾದ ಶ್ರೀ ವಾಸುದೇವ ಆರ್. ಕೊಟ್ಟಾರಿ ಭಾಗವಹಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸಮಿತಿಯ ಪರವಾಗಿ ಬಡ ಜನರಿಗೆ ಧನಸಹಾಯ ಹಾಗೂ ೧೦ ಕಲಾರಂಗದ ಹಿರಿಯ ಪ್ರತಿಭಾವಂತರಿಗೆ ಸನ್ಮಾನ ಮಾಡಲಾಯಿತು. ಅಂದಹಾಗೆ ೭೩ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ದೇವದಾಸ್ ಶೆಟ್ಟಿ, ಸಮಿತಿಯ ಅಧ್ಯಕ್ಷರಾದ ಭಾಸ್ಕರ್ .ಕೆ, ಉಪಾಧ್ಯಕ್ಷರಾದ ಸದಾನಂದ .ಜೆ, ಕಾರ್ಯದರ್ಶಿಯಾದ ಕೇಶವ ಬಜಾಲ್ , ಕೋಶಾಧಿಕಾರಿ ಜೆ.ಸುರೇಶ್ , ಜೊತೆ ಕಾರ್ಯದರ್ಶಿ ರವಿರಾಜ್ ಸುವರ್ಣ, ಆಡಳಿತ ಸಲಹೆಗಾರರಾದ ಚಂದ್ರಶೇಖರ .ಬಿ, ಮೊದಿನಬ್ಬ .ಜೆ, ಗೋಪಿನಾಥ್, ಕಿಶೋರ್ , ಸುರೇಶ್ , ಹರೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*