೭೩ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಿಕೊಂಡ ಮಾಜಿ ಸಚಿವ ರೈ

ಇಂದು ೭೩ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ಮಾಡೋದರ ಮೂಲಕ ಆಚರಿಸಿಕೊಂಡಿದ್ದಾರೆ. .ಆದ್ರೆ ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ , ದ.ಕ ಜಿಲ್ಲೆ ಸೇರಿ ಉ.ಕ ಪ್ರವಾಹಕ್ಕೆ ಒಳಗಾಗಿತ್ತು.ಈ ನಿಟ್ಟಿನಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸರಳವಾಗಿ ಆಚರಣೆ ಮಾಡುತ್ತಿದ್ದಾರೆ. ಇತ್ತ ಮಾಜಿ ಸಚಿವ .ಬಿ ರಮಾನಾಥ ರೈ ಮೂರು ಕಡೆಯಲ್ಲಿ ಧ್ವಜಾರೋಹಣ ಮಾಡಿ ನಾಡಿನ ಸಮಸ್ತ ನಾಗರಿಕರಿಗೆ ಶುಭಾಷಯ ಕೋರಿದ್ದಾರೆ .ಮಂಗಳೂರಿನ ಮಲ್ಲಿಕಟ್ಟೆ ಬಳಿಯಿರುವ ಕಾಂಗ್ರೆಸ್ ಭವನ , ಬಂಟ್ವಾಳದ ಬ್ಲಾಕ್ ಕಾಂಗ್ರೆಸ್ ಕಛೇರಿ, ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಧ್ವಜಾರೋಹಣ ನಡೆಸಲಾಯಿತು. ಇನ್ನು ಮಂಗಳೂರು ಮಲ್ಲಿಕಟ್ಟೆಯ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಧ್ವಜಾರೋಹಣ ಸಂದರ್ಭದಲ್ಲಿ ಹರೀಶ್ ಕೆ , ವಿಧಾನಪರಿಷತ್ ಸಚೇತಕ ಐವನ್ ಡಿಸೋಜ, ಮಿಥುನ್ ರೈ, ಜಿ ಆರ್ ಲೋಬೊ, ಶ್ರೀಮತಿ ಶಕುಂತಳಾ ಶೆಟ್ಟಿ, ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಪಿ.ವಿ ಮೋಹನ್, ಶಬೀರ್ ಸಿದ್ದಕಟ್ಟೆ, ಅಡ್ಯಂತಾರ್ ಉಪಸ್ಥಿತರಿದ್ದರು. ಇನ್ನು ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ, ಶಿವಪ್ರಸಾದ್, ಪದ್ಮನಾಭ ರೈ. ಶ್ರೀಮತಿ ಜಯಂತಿ, ಯೂಥ್ ಪ್ರೆಸಿಡೆಂಟ್ ಪ್ರಶಾಂತ್ ಕುಲಾಲ್, ಲುಕ್ಮಾನ್, ಚಿತಾರಂಜನ್ ಶ್ರೀಮತಿ ಗಾಯತ್ರಿ ಪ್ರಕಾಶ್, ಶ್ರೀಮತಿ ಜೆಸಿಂತಾ ಹಾಗೂ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*