ಇನ್ಫೋಸಿಸ್ ಸಂಸ್ಥೆಯ ಮುತುವರ್ಜಿಯ ಕೆಲಸ ಎಲ್ಲರಲ್ಲೂ ಸಂತೋಷ ತಂದಿದೆ ಮಾಜಿ ಸಚಿವ ಯುಟಿ ಖಾದರ್

ಇಂದು ನಾಡಿನೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದ್ದು ಇತ್ತ ಮಾಜಿ ಸಚಿವ ಯುಟಿ ಖಾದರ್ ನೇತೃತ್ವದಲ್ಲಿ ಉಳ್ಳಾಲ ಕ್ಷೇತ್ರದ ಬಬ್ಬುಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ .ಇನ್ನು ಬಬ್ಬುಕಟ್ಟೆಯ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಉದ್ಘಾಟನೆ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯಕ್ರಮ ಜರುಗಿದೆ .ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್ ,ಬಬ್ಬುಕಟ್ಟೆಯ ಈ ಶಾಲೆ ಮಾದರಿ ಶಾಲೆ ಯಾಗಬೇಕೆಂದು ನಾನು ಇಚ್ಛಿಸುತ್ತಾ ಬಂದಿದ್ದೆ ,ಅದರಂತೆ ಈ ಶಾಲೆಯ ಅಧ್ಯಕ್ಷರು ಮುಖ್ಯೋಪಾಧ್ಯಾಯರು ಶಿಕ್ಷಕರು ಸೇರಿದಂತೆ ಎಲ್ಲರೂ ಕೂಡ ಸಂಪೂರ್ಣ ಅಭಿವೃದ್ಧಿ ಯೋಜನೆ ಯಾಗಬೇಕೆಂದು ಪಟ್ಟು ಹಿಡಿದಿದ್ದರು .ಅದಕ್ಕಾಗಿ ನಾನು ಮುಖ್ಯಮಂತ್ರಿಯ ಬಳಿ ಹೋದಂತಹ ಸಂದರ್ಭದಲ್ಲಿ ಬೇಡಿಕೆಯನ್ನು ಇಟ್ಟಿದ್ದ ಸುಮಾರು ಐದು ಶಾಲೆಯನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಬೇಕೆಂಬ ಮಾತನ್ನು ತಿಳಿಸಿದ್ದೆ ಆದರೆ ಮೂರು ಶಾಲೆಗೆ ಮಾತ್ರ ಅನುಮತಿ ಸಿಕ್ಕಿತ್ತು .ಅದರಲ್ಲಿ ಒಂದು ಈ ಬಬ್ಬುಕಟ್ಟೆ ಶಾಲೆ .ಇಲ್ಲಿ ಇದೀಗ ಇಂಗ್ಲಿಷ್ ಮೀಡಿಯಂ ತರಗತಿ ಆರಂಭಗೊಂಡಿದ್ದು ಮೂಲಭೂತ ಸೌಕರ್ಯವನ್ನು ಮಾಡಿಕೊಡುವಲ್ಲಿ ಇನ್ಫೋಸಿಸ್ ಸಂಸ್ಥೆ ಕೈ ಜೋಡಿಸಿರುವುದು ಖುಷಿಯ ಸಂಗತಿ .ಇನ್ಫೋಸಿಸ್ ಮಾಡುವಂತಹ ಪ್ರತಿಯೊಂದು ಕೆಲಸ ಕೂಡ ಗಮನಾರ್ಹವಾಗಿದ್ದು ಈ ಶಾಲೆಗೆ ಮುತುವರ್ಜಿ ವಹಿಸಿ ಕೆಲಸ ಮಾಡಿರೋದು ಮತ್ತಷ್ಟು ಖುಷಿ ನೀಡಿದೆ ಅಂದ್ರು .ಎನ್ನುವ ಮಾತು ಮುಂದುವರಿಸಿದ ಮಾಜಿ ಸಚಿವ ಯುಟಿ ಖಾದರ್ ಇಂಗ್ಲಿಷ್ ತರಗತಿ ಆರಂಭವಾಗುವುದು ಕನ್ನಡವನ್ನು ಅಲ್ಲಿ ಸೊಲ್ಲ ಬದಲಾಗಿ ಎಲ್ಲರಿಗೂ ಎಲ್ಲಾ ತರದಲ್ಲಿ ಮಾತನಾಡುವಂತಹ ಧೈರ್ಯ ಹಾಗೂ ಛಲ ಬರಬೇಕು ಅನ್ನೋ ಉದ್ದೇಶದಿಂದ ಸರಕಾರಿ ಶಾಲೆಗಳಲ್ಲೂ ಕೂಡ ಇಂಗ್ಲಿಷ್ ತರಗತಿಯನ್ನು ಆರಂಭ ಮಾಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಒಂದು ಭಾಷೆಯನ್ನು ದ್ವೇಷಿಸಿದರೆ ಇನ್ನೊಂದು ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ ಎಲ್ಲರೂ ಎಲ್ಲ ಭಾಷೆಯನ್ನು ಕಲಿಯಬೇಕು ಪ್ರೀತಿಸಬೇಕು ಅಂತ ತಿಳಿಸಿದರು .ಅಂದಹಾಗೆ ಎಪ್ಪತ್ತು ಮೂರ ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಾಜಿ ಸಚಿವ ಯುಟಿ ಖಾದರ್ ನೇತೃತ್ವದಲ್ಲಿ ಬಬ್ಬುಕಟ್ಟೆಯ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಿಸಿದರು.ಹಾಗೆಯೇ ಇನ್ಫೋಸಿಸ್ ಸಂಸ್ಥೆಯ ವತಿಯಿಂದ 40 ಬೆಂಚ್ ಹಾಗೂ ಡೆಸ್ಕ್ ಗಳನ್ನು ನೀಡಲಾಯಿತು ಇನ್ನು ಈ ಸಂದರ್ಭದಲ್ಲಿ ಸ್ಥಳೀಯ ಕೌನ್ಸಿಲರ್ ಮುಸ್ತಾಕ್, ಸುಹಾಸಿನಿ, ಶಾಲಾ ಸಮಿತಿ ಅಧ್ಯಕ್ಷರಾದ ವಿಜಯ್ ಬಾಬು ,ಹಿರಿಯರಾದ ರಾಘಣ್ಣ ಹೊಸಗದ್ದೆ, ಪದ್ಮನಾಭ ನರಿಂಗಾಣ,ಹೈಸ್ಕೂಲ್ ಶಾಲಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ರಾಜೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*