ಮೆಲ್ಕಾರ್ -ಬಿ.ಸಿ.ರೋಡಿಗೆ ಇದ್ದ ಶಾರ್ಟ್ ಕಟ್ ರಸ್ತೆ ಸದ್ಯಕ್ಕೆ ಕ್ಲೋಸ್

ಸತತ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲ ಪ್ರವಾಹ ಸಂಭವಿಸಿದ್ದು ಮೆಲ್ಕಾರ್ ಬಿಸಿ ರೋಡ್ ಗೆ ಹೋಗಲು ಇದ್ದ ಶಾರ್ಟ್ ಕಟ್ ರಸ್ತೆಯನ್ನು ಇದೀಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ .ಕಂಬಳ ಪದವು ಇನ್ಫೋಸಿಸ್ ಮುಂಭಾಗದಿಂದ ಅಕ್ಕನ ಮೂಲಕ ಮಿತ್ತಕೋಡಿ ಸಂಪರ್ಕಿಸುವ ರಸ್ತೆಯಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆಯನ್ನು ಮುಚ್ಚಲಾಗಿದೆ .ಇನ್ನು ಈ ರಸ್ತೆಯಲ್ಲಿ ಸದಾ ನೂರಾರು ಜನರು ಓಡಾಡುತ್ತಿದ್ದು ಸಾರ್ವಜನಿಕರು ದಿನನಿತ್ಯ ಉಪಯೋಗಿಸುವ ರಸ್ತೆ ಇದಾಗಿದೆ .ಇನ್ನು ರಸ್ತೆಯನ್ನು ಸರಿಪಡಿಸಲು ಮಾಜಿ ಸಚಿವ ಯುಟಿ ಖಾದರ್ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದು ಮೆಲ್ಕಾರ್ ಬಿಸಿ ರೋಡಿಗೆ ಹೋಗುವ ಸಾರ್ವಜನಿಕರು ,ಈ ಹಿಂದೆ ಉಪಯೋಗಿಸುತ್ತಿದ್ದ ಮುಡಿಪು ಕಾಯರ್ ಗೋಲಿ ಕ್ರಾಸ್ ರಸ್ತೆಯನ್ನು ಉಪಯೋಗಿಸಬೇಕು ಅಂತ ಮಾಜಿ ಸಚಿವ ಖಾದರ್ ವಿನಂತಿಸಿಕೊಂಡಿದ್ದಾರೆ.

 

Be the first to comment

Leave a Reply

Your email address will not be published.


*