ಪುದು ಗ್ರಾಮದ ಪೇರಿಮಾರ್ ನಲ್ಲಿ ಬಕ್ರೀದ್ ಆಚರಣೆ – ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನಿಧಿ ಸಂಗ್ರಹಣೆ

ಬಂಟ್ವಾಳ್ಳ,ಅ.12: ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ಸಮೀಪದ ಪೇರಿಮಾರಿನ ಮಸ್ಜಿದುಲ್ ಖಿಳ್ ರ್ ಜುಮಾ ಮಸೀದಿಯಲ್ಲಿ ಸೋಮವಾರ ಬಕ್ರೀದ್ ಆಚರಿಸಲಾಯಿತು. ಮಸೀದಿಯಲ್ಲಿ ನಡೆದ ಬಕ್ರೀದ್ ವಿಶೇಷ ಪ್ರಾರ್ಥನೆ ಹಾಗೂ ಖುತುಬಾ ನೇತೃತ್ವವನ್ನು ಖತೀಬರಾದ ರಫೀಕ್ ಸ-ಅದಿ ಅಲ್ ಅಫ್ಳಲಿ ವಹಿಸಿದ್ದರು. ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರಲ್ಲದೆ ಇದೇ ವೇಳೆ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗಾಗಿ SYS, SSF, SBS ಶಾಖೆ ಪೇರಿಮಾರ್ ಇದರ ವತಿಯಿಂದ ಪರಿಹಾರ ಧನ ಸಂಗ್ರಹ ಮತ್ತು ಬಟ್ಟೆ ಬರೆಗಳು, ಆಹಾರ-ಸಾಮಗ್ರಿಗಳು, ಪಾತ್ರೆ ಪಗಡಿಗಳು ಹಾಗೂ ಇನ್ನಿತರ ತುರ್ತು ವಸ್ತುಗಳನ್ನು ಸಂಗ್ರಹಿಸುವ ಮೂಲಕ ಸ್ಪಂದಿಸಲಾಯಿತು. ಈ ಸಂದರ್ಭದಲ್ಲಿ SSF ಪೇರಿಮಾರ್ ಶಾಖಾ ಅಧ್ಯಕ್ಷರಾದ ನಝೀರ್ ಪೇರಿಮಾರ್, ಪ್ರಧಾನ ಕಾರ್ಯದರ್ಶಿ ರಹೀಂ ಬಿ.ಆರ್, ಕೋಶಾಧಿಕಾರಿ ಅಬ್ದುಲ್ ಸಮದ್ ಬಾಲ್ದಬೆಟ್ಟು, ಮಸ್ಜಿದುಲ್ ಖಿಳ್’ರ್ ಜುಮಾ ಮಸೀದಿಯ ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್.ಬಿ, ಜೊತೆ ಕಾರ್ಯದರ್ಶಿ & ಪುದು ಗ್ರಾಮ ಪಂಚಾಯತ್ ಸದಸ್ಯರಾದ ಹಾಶೀರ್ ಪೇರಿಮಾರ್, ಕೋಶಾಧಿಕಾರಿ ಬಿ. ಹುಸೈನ್ ಬಾಲ್ದಬೆಟ್ಟು ಮತ್ತು SSF ಪೇರಿಮಾರ್ ಶಾಖಾ ಸದಸ್ಯರಾದ ಅಮೀನ್ ಬಾಲ್ದಬೆಟ್ಟು, ಅನ್ಸಾರ್, ಆಸಿಫ್ ಬಾಲ್ದಬೆಟ್ಟು ರವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*