ಪುತ್ತೂರಿನಲ್ಲಿ ಭೀಕರ ಅಪಘಾತ ; ಉದ್ರಿಕ್ತರಿಂದ ಕಲ್ಲು ತೂರಾಟ

ಇಲ್ಲಿನ ಹೊರವಲಯದ ಪೋಳ್ಯ ಎಂಬಲ್ಲಿ ಖಾಸಗಿ ಬಸ್ಸ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಒಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ಇಂದು ಮದ್ಯಾಹ್ನ ನಡೆದಿದೆ. ಕಬಕ ಸಮೀಪದ ಪೊಳ್ಯದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಮಂಗಳೂರು ಕಡೇ ತೆರಳುತಿದ್ದ ಝೆನ್ ಕಾರು(KA 21 MB 4488) ಹಾಗೂ ಮಂಗಳೂರಿನಿಂದ ಪುತ್ತೂರಿಗೆ ತೆರಳುತಿದ್ದ ಖಾಸಗಿ ಬಸ್ಸ್ ಧರಿತ್ರಿ( KA 19 AB 1494) ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.ಚಾಲಕನ ಸೀಟ್ ಮತ್ತು ಅದರ ಹಿಂಬಾಗದ ಸೀಟು ಬಳಿ ಕಾರಿನ ಬಾಡಿ ಒಂದು ಅಡಿಯಷ್ಟು ಒಳಕ್ಕೆ ನೂಕಲ್ಪಟ್ಟಿದೆ. ಈಶ್ವರಮಂಗಲದ ಮುಂಡೋಳೆಯ ಅಬ್ದುಲ್ ಹಕೀಮ್ ಎಂಬವರು ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿ. ಮೃತರು ಕಾರಿನಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ತಮ್ಮ ಬಂಧು ,ಮಿತ್ರರ ಮನೆಗೆ ತೆರಳುತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಪಘಾತದಲ್ಲಾದ ಸಾವು – ನೋವಿನ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಘಟನಾ ಸ್ಥಳದಲ್ಲಿ ಸೇರಿದ ಉದ್ರಿಕ್ತರು ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರತ್ಯಕ್ಷ ಧರ್ಶಿಗಳು ತಿಳಿಸಿದಾರೆ. ಕಲ್ಲು ತೂರಾಟದಿಂದ ಬಸ್ಸಿನ ಹಿಂಬಾಗದ ಗಾಜು ಒಡೆದು ಹೋಗಿದೆ. ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದರಿಂದ ಕೆಲ ಸಮಯಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸುತಿದ್ದಾರೆ.

Be the first to comment

Leave a Reply

Your email address will not be published.


*