ಸಂತ್ರಸ್ತ ಕುಟುಂಬಗಳಿಗೆ ಹಾಗೂ ನಾಡಿನ ಸರ್ವ ಜನತೆಯ ಒಳಿತಿಗಾಗಿ ಅಲ್ಲಾಹು ನಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ಮಾಜಿ ಸಚಿವ ಯುಟಿ ಖಾದರ್

ತ್ಯಾಗ ಬಲಿದಾನಗಳ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ರಾಜ್ಯದೆಲ್ಲೆಡೆ ಬಹಳ ಸರಳವಾಗಿ ಈ ಬಾರಿ ಆಚರಣೆ ಮಾಡಲಾಗುತ್ತಿದೆ .ಈ ಬಾರಿ ಅತೀವ ಮಳೆಯಿಂದಾಗಿ ರಾಜ್ಯ ತತ್ತರಿಸಿ ಹೋಗಿದ್ದು ಎಲ್ಲೆಡೆ ಜಲಪ್ರಳಯ ಸಂಭವಿಸಿದೆ .ಈ ನಿಟ್ಟಿನಲ್ಲಿ ಈ ಬಾರಿಯ ಬಕ್ರೀದ್ ಹಬ್ಬವನ್ನು ಬಹಳ ಸರಳವಾಗಿ ಆಚರಣೆ ಮಾಡುವುದರ ಮೂಲಕ ಉತ್ತರ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಗೆ ನೆರವು ನೀಡಲು ಮುಸ್ಲಿಂ ಬಾಂಧವರು ಮುಂದಾಗಿದ್ದಾರೆ .ಇನ್ನು ದಕ್ಷಿಣ ಕನ್ನಡ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ ಬಹಳ ಸರಳವಾಗಿ ಈ ಬಾರಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ .ಇಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಸರಳತೆಯಿಂದ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಉಳ್ಳಾಲ ಕ್ಷೇತ್ರದ ಶಾಸಕ ಮಾಜಿ ಸಚಿವ ಯುಟಿ ಖಾದರ್ ಕೂಡ ಭಾಗಿಯಾಗಿದ್ದರು .ಈಗ ಮಸೀದಿಯಲ್ಲಿ ಈದುಲ್ ಅಝ್ ಹಾ ಪ್ರಾರ್ಥನೆಯನ್ನು ಸಲ್ಲಿಸಿದ ಯುಟಿ ಖಾದರ್ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ .ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಉತ್ತರ ಕರ್ನಾಟಕ ಜಲಪ್ರಳಯಕ್ಕೆ ಒಳಗಾಗಿದೆ ಈ ನಿಟ್ಟಿನಲ್ಲಿ ಬಹಳ ವಿಜೃಂಭಣೆಯಿಂದ ಈ ಬಾರಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುವುದಿಲ್ಲ .ಜೊತೆಗೆ ದೇವರಲ್ಲಿ ಎಲ್ಲರನ್ನು ರಕ್ಷಿಸಿ ಎಂಬ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದೇವೆ ಂಬ ಮಾತನ್ನು ಕೂಡ ಇದೇ ಸಂದರ್ಭದಲ್ಲಿ ತಿಳಿಸಿದರು .ದೇಶದಾದ್ಯಂತ ಪ್ರವಾಹದಿಂದಾಗಿ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಹಾಗೂ ನಾಡಿನ ಸರ್ವ ಜನತೆಯ ಒಳಿತಿಗಾಗಿ ವಿಶೇಷ ಪ್ರಾರ್ಥನೆಯನ್ನು ಖಾದರ್ ಸಲ್ಲಿಸಿದ್ದಾರೆ .

Be the first to comment

Leave a Reply

Your email address will not be published.


*