ಜಲಾವೃತಕ್ಕೊಳಗಾದ ಬೆಳ್ತಂಗಡಿ ತಾಲೂಕಿಗೆ ಪರಿಹಾರದ ಭರವಸೆ ನೀಡಿದ ಬಿಎಸ್‌ವೈ

ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಇನ್ನು ನೆರೆಹಾವಳಿ ಪ್ರದೇಶಗಳಿಗೆ ಭೇಟಿ ನೀಡಿದ ಬಿಎಸ್‌ವೈ ಬೆಳ್ತಂಗಡಿ ತಾಲೂಕಿನ ಕುಕ್ಕಾವು ಸಂತ್ರಸ್ತರಿಗೆ ಸಾಂತ್ವಾನ ಹೇಳಿದ್ದಾರೆ. ಇನ್ನು ತಾತ್ಕಾಲಿಕ ಪ್ರತಿ ಕುಟುಂಬಕ್ಕೆ ೧೦ ಸಾವಿರ ಪರಿಹಾರ ಮುಖ್ಯಮಂತ್ರಿ ನೀಡಿದ್ದು, ಇದರ ಜೊತೆಗೆ ಸಂಪೂರ್ಣ ಹಾನಿ ಯಾದ ಮನೆಗೆ ಹೊಸಮನೆ ನಿರ್ಮಾಣ ಭರವಸೆಕೊಟ್ಟಿದ್ದಾರೆ. ಅಂದಹಾಗೆ ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆಗೆ ಇಡೀ ದ.ಕ ಜಿಲ್ಲೆ ತತ್ತರಿಸಿದ್ದು; ಬೆಳ್ತಂಗಡಿ ತಾಲೂಕು ಜಲಾವೃತಗೊಂಡಿದೆ. ಪರಿಣಾಮ೩೨೧ ಮನೆ ಭಾಗಶಃ ಹಾನಿಯಾಗಿದ್ದು; ೨೭೫ ಮನೆ ಸಂಪೂರ್ಣ ಹಾನಿಯಾಗಿದೆ. ಇನ್ನು ತಾತ್ಕಾಲಿಕ ೫ ಸಾವಿರ ಬಾಡಿಗೆ ನಿರ್ಮಾಣಕ್ಕೆ ಮುಂದಾಗಿದ್ದು ಪ್ರತಿ ಮನೆ ರಿಪೇರಿಗೆ ೧ ಲಕ್ಷ ತಕ್ಷಣ ಪರಿಹಾರ ಸೂಚಿಸಿದ್ದಾರೆ . ಇನ್ನು ೧೫ ದಿವಸದಲ್ಲಿ ಕೆಲಸ ಶುರುವಾಗಲಿದ್ದು,ಸೈಟ್ ಇಲ್ಲದವರಿಗೆ ಹೊಸ ಸೈಟ್ ಹಾಗೂ ಕೃಷಿ, ಸಾರ್ವಜನಿಕ ಹಾನಿ ಸಂಬಂಧಿಸಿ ಸಮೀಕ್ಷೆ ಪಟ್ಟಿ ಮಾಡಿ ಪರಿಹಾರಕ್ಕೆ ನಿರ್ಧಾರ ಮಾಡಲಾಗಿದೆ.

Be the first to comment

Leave a Reply

Your email address will not be published.


*