ಭೀಕರ ಮಳೆಯಿಂದಗುಡ್ಡ ಕುಸಿದು ಮನೆ ನಾಶ, ಮರಳಿ ಮನೆ ನಿರ್ಮಾಣದ ಭರವಸೆ ಕೊಟ್ಟ ಮಾಜಿ ಸಚಿವ ರೈ

ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಅರ್ಧ ಕರ್ನಾಟಕ ಮುಳುಗಿ ಹೋಗಿದೆ. ವರುಣನ ಆರ್ಭಟಕ್ಕೆ ಇತ್ತ ದ.ಕ ಜಿಲ್ಲೆಯ ಬಂಟ್ವಾಳ ಹಾಗೂ ಬೆಳ್ತಂಗಡಿ ಕ್ಷೇತ್ರದ ಹಲವು ಗ್ರಾಮಗಳು ಕೊಚ್ಚಿಹೋಗಿದ್ದು , ಜಲಪ್ರಳಯ ಸಂಭವಿಸಿದೆ. ನೂರಾರು ಮನೆಗಳು ನೀರಿನಲ್ಲಿ ತೇಲಿ ಹೋಗಿದೆ. ಇನ್ನು ಬಂಟ್ವಾಳ ಕ್ಷೇತ್ರದ ಕನ್ಯಾನದಲ್ಲಿರುವ ಕರೋಪಾಡಿ ಗ್ರಾಮದ ಕರೋಪಾಡಿಯಲ್ಲಿಪ್ರವಾಹ ದಿಂದ ಐಸಮ್ಮ ಅವರ ಮನೆಯ ಹಿಂದೆ ಇದ್ದ ಗುಡ್ಡೆ ಕುಸಿದು ಮನೆ ನಾಶವಾಗಿದೆ. ಇನ್ನು ಗುಡ್ಡ ಕುಸಿತದಿಂದ ಮನೆಯ ಸ್ಥಿತಿ ಸಂಪೂರ್ಣ ಹಾಲಾಗಿದ್ದು ಮನೆಯ ಆಸ್ತಿ ಪಾಸ್ತಿ , ಕಾರು ಪಿಕಾಪ್ ಸೇರಿದಂತೆ ಎಲ್ಲಾ ವಸ್ತುಗಳು ನಾಶವಾಗಿದೆ. ಇನ್ನು ಬಂಟ್ವಾಳ ಕ್ಷೇತ್ರದ ಹಲವು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾಜಿ ಸಚಿವ ರೈ ಕರೋಪಾಡಿಯಲ್ಲಿರುವ ಐಸಮ್ಮರವರ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .ಈ ಸಂದರ್ಭದಲ್ಲಿ ಮಾತನಾಡಿದ ರೈ ಮುಖ್ಯಮಂತ್ರಿ ಜೊತೆ ಮಾತನಾಡಿ ಪರಿಹಾರ ನಿಧಿಯಿಂದ ಪರಿಹಾರ ತೆಗೆಸಿಕೊಟ್ಟು ಮರಳಿ ಮನೆ ಕಟ್ಟುವ ಭರವಸೆ ಕೊಟ್ಟರು.ಈ ಸಂದರ್ಭದಲ್ಲಿ , ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಸ್ ಮೊಹಮದ್,ತಾಲೂಕ್ ಪಂಚಾಯತ್ ಸದಸ್ಯರಾದ ಉಸ್ಮಾನ್ ಕರೋಪಾಡಿ ಹಾಗೂ ಮನೆಯ ಕುಟುಂಬಸ್ಥರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*