೬೨ ಇಂಜಿನಿಯರ್ಸ್‌ಗಳ ಅಂತರ್ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ; ವಿಜೇತರಿಗೆ ಆಕರ್ಷಕ ಬಹುಮಾನ ನೀಡಿದ ಸಂಸ್ಥೆ

ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ಅಂದ್ರೆ ಎಲ್ಲರಿಗು ಚಿರಪರಿಚಿತ .ಶಟಲ್ ಬ್ಯಾಡ್ಮಿಂಟನ್ , ಟೇಬಲ್ ಟೆನ್ನಿಸ್ , ಕ್ರಿಕೇಟ್ ತರಭೇತಿಯನ್ನು ಈ ಸಂಸ್ಥೆ ಉತ್ತಮ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರೋ ಕ್ರೀಡಾಪಟುಗಳಿಂದ ತರಭೇತು ನೀಡುತ್ತಿದ್ದು; ಹಲವು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಇಲ್ಲಿ ಕ್ರೀಡಾಭ್ಯಾಸವನ್ನು ನಡೆಸಿ ಜಿಲ್ಲಾ,ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದಿದ್ದಾರೆ .ಅಷ್ಟು ಮಾತ್ರವಲ್ಲದೆ ಹಲವು ಕ್ಷೇತ್ರಗಳ ಕ್ರೀಡಾಸಕ್ತರ ಕ್ರೀಡಾಭಿರುಚಿಯನ್ನು ಅರಿತ ಈ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್ ವೈದ್ಯರು, ವಕೀಲರು , ಪೊಲೀಸರು, ಸೇರಿದಂತೆ ಹಲವು ರಂಗಗಳಿಗೆ ಪಂದ್ಯಾವಳಿಯನ್ನು ಆಯೋಜಿಸಿ ಯಶಸ್ಸು ಹಾಗೂ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಂದಹಾಗೆ ಗೌತಮ್ ಶೆಟ್ಟಿ ಅಧ್ಯಕ್ಷತೆಯಲ್ಲಿರೋ ಈ ಸಂಸ್ಥೆ ಇತ್ತೀಚೆಗೆ ಇಂಜಿನಿಯರ್ಸ್‌ಗಳಿಗಾಗಿ ಅಂತರ್‌ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿದ್ದು , ಸುಮಾರು ೬೨ ವೃತ್ತಿಪರ ಇಂಜಿನಿಯರ್‍ಸ್‌ಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು;ಪುರುಷರ ಸಿಂಗಲ್ಸ್‌ನಲ್ಲಿ ಪವನ್ ಬಜಗೊಳಿ ಮೊದಲ ಸ್ಥಾನವನ್ನು ಪಡೆದಿದ್ದಾರೆ , ದಾಮೋದರ್ ಮಂಗಳೂರು ೨ ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಅದೇ ರೀತಿ ಪುರುಷರ ಡಬಲ್ಸ್‌ನಲ್ಲಿ ಉಡುಪಿಯ ಪವನ್ ಹಾಗೂ ರಂಜಿತ್ ಪ್ರಥಮ ಸ್ಥಾನದಲ್ಲಿದ್ದರೆ , ಎರಡನೇ ಸ್ಥಾನಕ್ಕೆ ಮನೋಜ್ ಶೆಣೈ ಹಾಗೂ ಅಜಯ್ ಪಡುಬಿದಿರೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇನ್ನು ಪಂದ್ಯಾವಳಿಯ ಕೊನೆಯಲ್ಲಿ ಸಮಾರೋಪ ಸಮಾರಂಭ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷರಾದ ನಾಗಭೂಷನ್ ರೆಡ್ಡಿ, ಇವೆಂಟ್ ಕಾರ್ಡಿನೇಟರ್ ಗಣೇಶ್ ಕಾಮತ್ , ಟಾರ್ಪಡೋಸ್ ಸಂಸ್ಥೆಯ ಸದಸ್ಯರಾದ ಸತೀಶ್ ಕೆ.ಪಿ, ಚೀಫ್ ರೆಫ್ರೀ ಸಂದೀಪ್ ಶೆಟ್ಟಿ ,ತರಭೇತುದಾರರಾದ ಸಂತೋಷ್ ಕಾರ್ವಿ, ಕಾರ್ತಿಕ್ ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*