೫ನೇ ವರ್ಷದ ಆಶ್ರಯ ಆಟೋ ಯುನಿಯನ್ ಸಭೆ; ಜಿಲ್ಲಾಧ್ಯಕ್ಷರಾಗಿ ಸಾದೀಕ್ ಮಿಷನ್ ಕಂಪೌಡ್ ಆಯ್ಕೆ

ಶ್ರಮ ಜೀವಿಗಳು,ಅಪಾತ್ಬಾಂಧವರೆಂದೆ ಕರೆಯಲ್ಪಡುವ ಆಟೋ ಚಾಲಕರ ಮಹಾಸಭೆ ನಡೆಯಿತು. ಆಶ್ರಯ ಆಟೋ ಯುನಿಯನ್‌ ವತಿಯಿಂದ ವರ್ಷದ ಮಹಾಸಭೆಯು ಬನ್ನಂಜೆಯ ಗುರುನಾರಯಣ್ ಸಭಾ ಭವನದಲ್ಲಿ ಜರುಗಿತು.ಸಭೆಯಲ್ಲಿ ‌೨೦೧೯-೨೦ನೇ ಸಾಲಿನ‌ ಯೂನಿಯನ್ ಜಿಲ್ಲಾ ಕಮಿಟಿಯನ್ನು ಆಯ್ಕೆ ಮಾಡಲಾಯಿತು. ಕಳೆದ ೫ ವರ್ಷಗಳಿಂದ ಅಶ್ರಯ ಆಟೋ ಯುನಿಯನ್ ಅಧ್ಯಕ್ಷರಾಗಿದ್ದ ರಮೇಶ್ ಶೆಟ್ಟಿ ಸ್ಥಾಪಕಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.ಉಡುಪಿ ಜಿಲ್ಲಾಧ್ಯಕ್ಷರಾಗಿ ಸಾದೀಕ್ ಮಿಷನ್ ಕಂಪೌಡ್ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಾಪಕಧ್ಯಕ್ಷರಾದ ರಮೇಶ್ ಶೆಟ್ಟಿ ‌ಮಾತನಾಡಿ ಚಾಲಕರ ಅನುಮತಿಯ ಮೆರೆಗೆ ಅಧ್ಯಕ್ಷ ಸ್ಥಾನವನ್ನು ಆಟೋ ಚಾಲಕರಿಗೆ ವಹಿಸಿದ್ದು ಸ್ಥಾಪಕಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತೋಷದ ವಿಷಯ ಎಂದರು. ಈ‌ ಸಂದರ್ಭದಲ್ಲಿ ಸಾದೀಕ್ ಮಿಷನ್ ಕಂಪೌಡ್ ಮಾತನಾಡಿ ಆಟೋ ಚಾಲಕರ ಏಳಿಗೆ ಹಾಗೂ ದುಡಿಮೆಯಲ್ಲಿ ಸದಾ ಜೊತೆಗಿರುತ್ತೇನೆ.ಯಾವುದೇ ಸಮಸ್ಯೆಗಳಿದ್ದರು ಸದಾ ಆಟೋ ಚಾಲಕರ ಜೊತೆಗಿರುತ್ತೇನೆ ಎಂದು ರಿಕ್ಷಾ ಚಾಲಕರಿಗೆ ಹುರಿದುಂಬಿಸಿದರು. ಇನ್ನು ಚಾಲಕರ ಸಮಸ್ಯೆಗಳಿಗೆ ಸದಾ ಬೆಂಬಲಿತವಾಗಿ ನಿಲ್ಲುವ ಶಿವಾನಂದ ಮೂಡಬೆಟ್ಟು ರವರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾಗಿ ಅಬ್ದುಲ್ ರಫೀಕ್,ದಯಾನಂದ ಪಾಣಿಯಾರು,ಹರೀಶ್ ನಿಟ್ಟೂರು,ರೊನಾಲ್ಡ್ ಡಿಸೋಝಾ ಮಾದರಂಗಡಿ,ಶೇಖರ ಇಂದ್ರಾಳಿ,ಮಹಮ್ಮದ್ ಅಲಿ ಬ್ರಹ್ಮಾವರ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಹೊಸಬೀಡು,ಜಿಲ್ಲಾ ಕೋಶಾಧಿಕಾರಿ ಮಹಮ್ಮದ್ ಲತೀಫ್,ಕಾನೂನು ಸಲಹೆಗಾರರಾಗಿ ಸಬೀನಾ ಶೆಟ್ಟಿ,ಸಲಹಾ ಸಮಿತಿ ಯವರಾಗಿ ನವೀನ್ ಕುಲಾಲ್ ಪಾಣಿಯೂರು,ಅಣ್ಣಪ್ಪ ಉಪ್ಪುರು,ರಮೇಶ್ ಜೋಗಿ,ರಮೇಶ್ ಹೂಡೆ,ಉಮೇಶ್ ಸಾಲಿಕೇರಿ,ಹರೀಶ್ ಪೂಜಾರಿ,ಸಾಧಿಕ್ ಕೆಮ್ಮಣ್ಣು,ಅಬ್ಬಾಸ್ ಕಾಪು,ಉಮೇಶ್ ಶೆಟ್ಟಿ ಅಂಬಾಗಿಲು ಆಯ್ಕೆಯಾದರು. ಇನ್ನು ಕಾರ್ಯಕ್ರಮದಲ್ಲಿ ಕಮಿಟಿ ಸದಸ್ಯರಾದ ನಾಗೇಂದ್ರ ಕೆ.ಆರ್,ಮಹಮ್ಮದ್ ಆರೀಫ್ ಬ್ರಹ್ಮಾವರ,ನರಸಿಂಹ ಕೊಲಗಿರಿ,ಮಹೇಶ್ ಮೆಂಡನ್,ಶೇಖ್ ಅಹಮ್ಮದ್ ಇಬ್ರಾಹಿಂ, ಚಂದ್ರ ಶೇಖರ್ ಭಟ್,ಸಂಜೀವ ಕಾಂಚನ್,ಜೋನ್ ಬನ್ನಂಜೆ,ವಿಜಯ ಪೂಜಾರಿ, ಸಾದಶಿವ ಪೂಜಾರಿ,ಅಬು ಮಹಮ್ಮದ್,ಭಾಸ್ಕರ ಪೂಜಾರಿ, ನರಸಿಂಹ ಕಿನ್ನಿಮುಲ್ಕಿ,ಹುಸೇನಾರ್ ಕಾಪು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*