ಪ್ರವಾಹ ಪೀಡಿತ ಬರಿಮಾರ್ನಲ್ಲಿ ಪ್ರದೇಶಕ್ಕೆ ಭೇಟಿ ನೀಡಿದ ಮಾಜಿ ಸಚಿವ ರೈ

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಂಟ್ವಾಳ ಕ್ಷೇತ್ರ ಅಕ್ಷರಶಃ ತತ್ತರಿಸಿ ಹೋಗಿದೆ .ಇಡೀ ಬಂಟ್ವಾಳ ಕ್ಷೇತ್ರದ ಗ್ರಾಮ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು,ಜನರು ವಾಸ ಮಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ . ಇತ್ತ ಬಂಟ್ವಾಳ ತಾಲ್ಲೂಕು ಜಲಾವೃತ ಗೊಳ್ಳುತ್ತಿದ್ದಂತೆ ಬಂಟ್ವಾಳ ತಾಲ್ಲೂಕಿನ ನೆರೆ ಹಾವಳಿ ಪ್ರದೇಶಕ್ಕೆ ಮಾಜಿ ಸಚಿವ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .ಹೌದು ಬಂಟ್ವಾಳ ತಾಲೂಕಿನ ಬರಿಮಾರ್ನಲ್ಲಿ ತೀವ್ರವಾದ ಪ್ರವಾಹ ಪೀಡಿತ ಪ್ರದೇಶಕ್ಕೆ ಮಾಜಿ ಸಚಿವ ರಮಾನಾಥ್ ರೈ ದೋಣಿ ಮೂಲಕ ಸಂಚರಿಸಿದ್ದು ಸುರಕ್ಷಿತ ಸ್ಥಳಗಳಿಗೆ ಜನರನ್ನು ರವಾನಿಸುವಲ್ಲಿ ರೈ  ಸಹಕರಿಸಿದ್ದಾರೆ . ಈ ಸಂದರ್ಭದಲ್ಲಿ ಸಲೀಂ ಬರಿಮಾರ್ ಅಬ್ಬಾಸ್ ಅಲಿ ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು .

Be the first to comment

Leave a Reply

Your email address will not be published.


*