ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 62ಇಂಜಿನಿಯರ್ಸ್ ಗಳ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಶಸ್ವಿ

ಮಂಗಳೂರು ಹಳೆಯಂಗಡಿ ಬಳಿ ಇರುವ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಎಲ್ಲರಿಗೂ ಚಿರಪರಿಚಿತ .ಚಿಕ್ಕ ಮಕ್ಕಳಿಂದ ಹಿಡಿದು ಕ್ರೀಡಾಸಕ್ತರಿಗೆ ಅವಕಾಶವನ್ನು ಕೊಡುವುದರ ಮೂಲಕ ಟಾರ್ಪಡೋಸ್ ಸಂಸ್ಥೆ ತನ್ನದೆಯಾದ ಛಾಪನ್ನು ಎಲ್ಲೆಡೆ ಬಿತ್ತರಿಸಿ ಕೊಂಡಿದೆ .ಇನ್ನು ಪ್ರತಿ ಬಾರಿ ಹಲವು ಕ್ಷೇತ್ರಗಳಿಗೆ ಪಂದ್ಯಾವಳಿಯನ್ನು ಆಯೋಜಿಸುವುದರ ಮೂಲಕ ಎಲ್ಲರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದೆ .ವೈದ್ಯಕೀಯ ರಂಗ, ಪೊಲೀಸ್ ರಂಗ, ವಕೀಲರ ರಂಗ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಯೋಜಿಸಿದ್ದು ಈ ಬಾರಿ ಇಂಜಿನಿಯರ್ಸ್ ಗಳಿಗೆ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು .ಇನ್ನು ಆಗಸ್ಟ್ 4ರಂದು ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು,62ಎಂಜಿನಿಯರ್ಸ್ಗಳು ಇದರಲ್ಲಿ ಭಾಗಿಯಾಗಿದ್ದರು .ಇನ್ನು ಪಂದ್ಯಾವಳಿ ಆರಂಭಕ್ಕೂ ಮುನ್ನ ಉದ್ಘಾಟನಾ ಸಮಾರಂಭ ಜರುಗಿದ್ದು ಕಾರ್ಯಕ್ರಮದಲ್ಲಿ ಕುಂದಾಪುರ ತಾಲ್ಲೂಕು ಎಂಜಿನಿಯರ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಹಾಗೂ ರಾಜ್ಯ ವಾಲಿಬಾಲ್ ಆಟಗಾರ ಗುರುರಾಜ್ ಭಟ್ ,ಹಿಮಾಲಯ ಪ್ರೊಡಕ್ಟ್ ಸೀನಿಯರ್ ಸೇಲ್ಸ್ ಆಫೀಸರ್ ದಿನೇಶ್ ಆಚಾರ್ಯ ,ಉದ್ಯಮಿ ನಾಗಭೂಷಣ್ ರೆಡ್ಡಿ ,ಸ್ಫೋರ್ಟ್ಸ್ ಡೆನ್ ಇವೆಂಟ್ ಕೋರ್ಡಿನೇಟರ್ ಗಣೇಶ್ ಕಾಮತ್ ,ಬ್ಯಾಡ್ಮಿಂಟನ್ ಕೋಚ್ ಸಂತೋಷ್, ಟಾರ್ಪೊಡೊಸ್ ಸ್ಪೋರ್ಟ್ಸ್ ಕ್ಲಬ್ ಮ್ಯಾನೇಜರ್ ಸಂತೋಷ್ ಕೆ.ಪಿ ,ಕಾರ್ತಿಕ್, ನವನೀತ್ ಸೇರಿದಂತೆ ಹಲವರು ಭಾಗಿಯಾಗಿದ್ದರು .

Be the first to comment

Leave a Reply

Your email address will not be published.


*