ಇಂಜಿನಿಯರ್ಸ್ ಗಳಿಗಾಗಿ ಟಾರ್ಪಡೋಸ್ ವತಿಯಿಂದ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್  ಹಲವಾರು ಕ್ರೀಡಾ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಲೇ ಬಂದಿದೆ .ಹೊಸ ಹೊಸ ಯೋಜನೆಗಳ ಮೂಲಕ ಕ್ರೀಡಾಸಕ್ತರನ್ನು ಸೆಳೆಯುತ್ತಿರುವ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ಈ  ಬಾರಿ ಇಂಜಿನಿಯರ್ಸ್ ಗಳಿಗೆ ಉತ್ತಮ ಅವಕಾಶವನ್ನು ನೀಡಿದ್ದಾರೆ .ಹೌದು ಈಗಾಗಲೇ ವಕೀಲರು, ಪೊಲೀಸರು ,ವೈದ್ಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಿಗೆ ಅವಕಾಶವನ್ನು ನೀಡಿದ್ದ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ; ಇದೇ ಆಗಸ್ಟ್ 4ರಂದು ಇಂಜಿನಿಯರ್ಸ್ ಗಳಿಗಾಗಿ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ಆಯೋಜನೆ ಮಾಡಿದೆ.ಅಂದಹಾಗೆ ಈ ಪಂದ್ಯಾವಳಿಯಲ್ಲಿ ಪುರುಷರು ಹಾಗೂ ಮಹಿಳೆಯರು ಭಾಗವಹಿಸಲಿದ್ದು, ಎರಡು ವಿಭಾಗಗಳಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ಟೂರ್ನಮೆಂಟ್ ನಡೆಯಲಿದೆ .ಇನ್ನು ಆಸಕ್ತ ಇಂಜಿನಿಯರ್ಸ್ ಗಳು ಇದೇ ಜುಲೈ 31 ರಂದು ತಮ್ಮ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕವಾಗಿದ್ದು ಕೂಡಲೇ ಕ್ರೀಡೆಯಲ್ಲಿ ಆಸಕ್ತಿಯುಳ್ಳ ಇಂಜಿನಿಯರ್ಸ್ ಗಳು ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ನ್ನು ಸಂಪರ್ಕಿಸಿ .

Be the first to comment

Leave a Reply

Your email address will not be published.


*