ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಶುಭ ವಿದಾಯ ಕೋರುವ ಕಾರ್‍ಯಕ್ರಮ; ಮುಖ್ಯ ಅತಿಥಿಯಾಗಿ ಭಾಗಿಯಾದ ಮಾಜಿ ಸಚಿವ ರೈ

ಮಸ್ಜಿದ್ -ಎ – ಮುತಲಿಬ್ , ಗೂಡಿನ ಬಳಿ ಹಯಾತುಲ್ ಇಸ್ಲಾಂ ಸಂಘ (ರಿ.) ಗೂಡಿನ ಬಳಿ ಸಮಸ್ತ ಜಮಾಅತರು ಮತ್ತು ಹಯಾತುಲ್ ಇಸ್ಲಾಂ ವಿದ್ಯಾಸಂಸ್ಥೆಗಳ ವತಿಯಿಂದ ಭಾನುವಾರ ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ ಶ್ರೀ .ಬಿ . ರಾಮಚಂದ್ರ ರಾವ್ ಇವರಿಗೆ ಶುಭ ವಿದಾಯ ಕೋರುವ ಕಾರ್‍ಯಕ್ರಮ ಆತ್ಮೀಯ ಆಮಂತ್ರಣ ಕಾರ್‍ಯಕ್ರಮ ಜರುಗಿದೆ. ಭಾನುವಾರ ಸಂಜೆ ಗೂಡಿನಬಳಿ ಸಭಾಂಗಣದ ಸಮುದಾಯ ಭವನದಲ್ಲಿ ಕಾರ್‍ಯಕ್ರಮ ಜರುಗಿದ್ದು ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ರೈ ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ ಶ್ರೀ .ಬಿ . ರಾಮಚಂದ್ರ ರಾವ್‌ರವರಿಗೆ ಅಭಿನಂದನೆ ಸಲ್ಲಿಸದ್ರು. ಇನ್ನು ಶ್ರೀ .ಬಿ . ರಾಮಚಂದ್ರ ರಾವ್‌ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿಸಲಾಯಿತು. ಈ ಸಂದರ್ಭದಲ್ಲಿ ಮಸ್ಜಿದ್ -ಎ – ಮುತಲಿಬ್ , ಗೂಡಿನ ಬಳಿಯ ಅಧ್ಯಕ್ಷರಾದ .ಜಿ.ಎಸ್ .ಮುಹಮ್ಮದ್ ಅನ್ವರ್ ಅಧ್ಯಕ್ಷತೆಯನ್ನು ವಹಿಸಿದ್ರು. ಇನ್ನು ದುವಾ ಹಾರೈಕೆಯನ್ನು ಮಸ್ಜಿದ್ -ಎ – ಮುತಲಿಬ್ , ಗೂಡಿನ ಬಳಿಯ ಖತೀಬರಾದ ಬಹುಮಾನ್ಯರಾದ ಮುಹಮ್ಮದ್ ಶಾಫಿ ಇರ್ಫಾನಿ ಫೈಝಿ ನೆರವೇರಿಸಿದ್ದಾರೆ.ಇನ್ನು ಕಾರ್‍ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಬಿ.ಹೆಚ್ ಖಾದರ್ , ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವಪ್ರಕಾಶ್, ಗೂಡಿನಬಳಿ ೧೪ ನೇ ವಾರ್ಡ್‌ನ ಪುರಸಭಾ ಸದಸ್ಯರಾದ ಶ್ರೀಮತಿ ಝೀನತ್ ಫಿರೋಝ್ , ಗೂಡಿನ ಬಳಿ ೧೩ ನೇ ವಾರ್ಡ್‌ನ ಪುರಸಭಾ ಸದಸ್ಯರಾದ ಶ್ರೀಮತಿ ಸಂಶದ್ ಬಾನು, ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಮಾಜಿ ಸದಸ್ಯರಾದ ಪಿ.ಎ ರಹೀಂ, ಚಿಕ್ಕಯ್ಯ ಮಠ ಬಳಕ ನಾಗರಿಕ ಸೇವಾ ಸಂಘದ ಕೋಶಾಧಿಕಾರಿಯಾದ ಸುರೇಶ್ ಸಾಲ್ಯಾನ್ , ಸೈಂಟ್ ಅಂತೋನಿ ಚರ್ಚ್‌ಬಳಕದ ಗುರಿಕಾರರಾದ ಜಾಯ್ ಡಿಕ್ರೋಜ್ , ಹಯಾತುಲ್ ಇಸ್ಲಾಂ ಟ್ರಸ್ಟ್ ಗೂಡಿನಬಳಿ ಇದರ ಅಧ್ಯಕ್ಷರಾದ ಎನ್.ಎ ಅಬ್ದುಲ್ಲ, ಮಸ್ಜಿದ್ -ಎ – ಮುತಲಿಬ್ , ಗೂಡಿನ ಬಳಿ ಇದರ ಗೌರವಾಧ್ಯಕ್ಷರಾದ ಜಿ.ಎಂ ಮುಹಮ್ಮದ್ , ಬಂಟ್ವಾಳ ಪುರಸಭಾ ಹಾಗೂ ಸಂಚಾಲಕರಾದ ಹಯಾತುಲ್ ಇಸ್ಲಾಂ ಅಂ.ಮಾ.ಶಾಲೆ ಗೂಡಿನಬಳಿ ಮುಹಮ್ಮದ್ ಇಕ್ಬಾಲ್ , ಹಯಾತುಲ್ ಇಸ್ಲಾಂ ಅ. ಹಿ. ಪ್ರಾ..ಶಾಲೆ ಗೂಡಿನಬಳಿ ಮಾಜಿ ಉಪಾಧ್ಯಕ್ಷರಾದ ಕೆ. ಹಾಮದ್ ಬಾವ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*