ನಾಗೇಶ್ ಪಡು ಸಾವಿಗೆ ಸಂತಾಪ ಸೂಚಿಸಿದ ಮಾಜಿ ಸಚಿವ ರೈ

ಕರಾವಳಿ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಮಾರಣಾಂತಿಕ ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ಬಲಿಯಾದ ಘಟನೆ ಇಂದು ಜರುಗಿದೆ. ನಗರದ ನೀರುಮಾರ್ಗ ಸಮೀಪದ ಪಡು ನಿವಾಸಿ ನಾಗೇಶ್ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದು , ಇವರು ಖಾಸಗಿ ಚ್ಯಾನೆಲ್‌ವೊಂದರಲ್ಲಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಇವರ ಸಾವಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಸಂತಾಪ ಸೂಚಿಸಿದ್ದಾರೆ. ಇನ್ನು ನಾಗೇಶ್ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ರೈ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಉದಯೋನ್ಮುಖ ಪತ್ರಕರ್ತ ಇಂದು ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.ಇದು ನಮಗೆಲ್ಲರಿಗೂ ನೋವನ್ನುಂಟುಮಾಡಿದೆ.. ನಾಗೇಶ್ ಸಜ್ಜನಿಕೆಯ ವ್ಯಕ್ತಿ .ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಕೆಲಸ ನಿರ್ವಹಿಸುತ್ತಿದ್ದರು.ಅವರ ಆತ್ಮಕ್ಕೆ ಚಿರಸಾಂತಿ ಸಿಗಲಿ .ಅವರ ಕುಟುಂಬಕ್ಕೆ ದು:ಖ ಭರಿಸುವ ದೈರ್ಯ ಆ ದೇವರು ಕರುಣಿಸಲಿ ಅಂತ ಸಂತಾಪ ಸೂಚಿಸಿದ್ದಾರೆ.

 

Be the first to comment

Leave a Reply

Your email address will not be published.


*