ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಪತ್ರಕರ್ತ ;ಚಿಕಿತ್ಸೆ ಫಲಕಾರಿಯಾಗದೇ ಸಾವು

ಮಂಗಳೂರು(ಜು22,2019):ಕರಾವಳಿ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ಮಾರಣಾಂತಿಕ ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ಬಲಿಯಾದ ಘಟನೆ ನಡೆದಿದೆ. ನಗರದ ನೀರುಮಾರ್ಗ ಸಮೀಪದ ಪಡು ನಿವಾಸಿ ನಾಗೇಶ್ ಡೆಂಗ್ಯೂ ಜ್ವರಕ್ಕೆ ಬಲಿಯಾದವರು.ಅವರು ಬಿಟಿವಿ ಖಾಸಗಿ ಚ್ಯಾನೆಲ್‍ನಲ್ಲಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಶಂಕಿತ ಡೆಂಗ್ಯೂವಿನಿಂದ ಬಳಲುತ್ತಿದ್ದ ಅವರು ಜ್ವರ ಉಲ್ಬಣಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಾಗೇಶ್ ಮೃತಪಟ್ಟಿದ್ದಾರೆ. ಮೃತ ನಾಗೇಶ್ ಖಾಸಗಿ ವಾಹಿನಿಯಲ್ಲಿ ಪತ್ರಕರ್ತರಾಗಿ (ವಿಡಿಯೋ ಜರ್ನಲಿಸ್ಟ್) ಹಲವಾರು ವರುಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

 

Be the first to comment

Leave a Reply

Your email address will not be published.


*