ಖಾಸಗಿ ವಾಹಿನಿಯ ಪತ್ರಕರ್ತನ ಸಾವಿಗೆ ಸಂತಾಪ ಸೂಚಿಸಿದ ಶಾಸಕ ಯು.ಟಿ ಖಾದರ್

ಖಾಸಗಿ ವಾಹಿನಿಯ ವೀಡಿಯೋ ಜರ್ನಲಿಸ್ಟ್ ಹಾಗೂ ಪತ್ರಕರ್ತ ಸಂಘದ ಸದಸ್ಯರಾಗಿದ್ದ ನಾಗೇಶ್ ಪಡು ಕಳೆದ ಹಲವಾರು ದಿನಗಳಿಂದ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು .ಅದ್ರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.ಇನ್ನು ಈ ವಿಷಯ ತಿಳಿದ ತಕ್ಷಣ ಶಾಸಕ ಯು.ಟಿ ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ. ನಾಗೇಶ್ ಪಡುರವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ , ಸ್ನೇಹಿತರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Be the first to comment

Leave a Reply

Your email address will not be published.


*