ದಲಿತರ ಮೇಲಿನ ದೌರ್ಜನ್ಯ ಖಂಡನೀಯ -ಮಾಜಿ ಸಚಿವ ರಮಾನಾಥ್ ರೈ

ಉತ್ತರ ಪ್ರದೇಶದಲ್ಲಿ ಪಂಚಾಯತ್ ಅಧ್ಯಕ್ಷರು ಸೇರಿ ಸುಮಾರು ೧೧ಜನರನ್ನು ಗುಂಡಿಕ್ಕಿ ಕೊಂದಿರುವ ಪ್ರಕರಣ ನಡೆದಿದೆ ಇದಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ರಮಾನಾಥ್ ರೈ ಮಾತನಾಡಿದ್ದಾರೆ. ಸುಮಾರು ನೂರು ವರ್ಷಗಳ ಹಿಂದಿನಿಂದಲೂ ದುರ್ಬಲರ ಮೇಲೆ ಅಶಕ್ತರ ಮೇಲೆ ಬಲಿಷ್ಠ ವರ್ಗದವರು ಶೋಷಣೆಯನ್ನು ನಡೆಸುತ್ತಲೇ ಬಂದಿದ್ದಾರೆ .ಅದರಲ್ಲೂ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಳೆದ ಐದು ಆರು ವರ್ಷಗಳಲ್ಲಿ ಮತ್ತೆ ಅಂತಹದ್ದೇ ಪ್ರಕರಣಗಳು ಮರುಕಳಿಸುತ್ತಿದೆ .ಮಾತ್ರವಲ್ಲ ಅಧಿಕಾರಿಗಳನ್ನೇ ಬಹಿರಂಗವಾಗಿ ಹೊಡೆಯೋದು ಗೋಹತ್ಯೆ ಧರ್ಮದ ಹೆಸರಲ್ಲಿ ಸುಖಾಸುಮ್ಮನೆ ಜನರನ್ನು ಹೊಡೆದು ಸಾಯಿಸುವುದು, ಮಾತ್ರವಲ್ಲ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರವನ್ನು ನಡೆಸೋದು ಉತ್ತರ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರ್ತಾ ಇದೆ .ಪ್ರತಿ ಬಾರಿ ದುರ್ಬಲರ ಮೇಲೆ ಇಂತಹ ದಬ್ಬಾಳಿಕೆ ನಡೆಸೋದು ಸರಿಯಲ್ಲ ಅಂತ ತಿಳಿಸಿದ್ದಾರೆ .ಮಾತ್ರವಲ್ಲ ಹನ್ನೊಂದು ಜನರನ್ನು ಗುಂಡಿಕ್ಕಿ ಕೊಂದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಲು ಹೋದ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿ ಪ್ರವಾಸಿ ತಾಣದಲ್ಲಿ ಇರಿಸಿರುವುದು ಖಂಡನೀಯ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಅನ್ನೋದನ್ನು ನೀವೇ ಯೋಚಿಸಬೇಕು ಉತ್ತರ ಪ್ರದೇಶದ ಸರ್ಕಾರ ಮಾಡುವಂತಹದ್ದು ಸರಿಯಲ್ಲ ಜೊತೆಗೆ ಈ ಹಿನ್ನೆಲೆಯಲ್ಲಿ ಅಲ್ಲಿ ನೀರು ಕರೆಂಟ್ ಎರಡನ್ನೂ ಕಡಿತಗೊಳಿಸಲಾಗಿದೆ ಇದು ನ್ಯಾಯಯುತ ವಾದದ್ದಲ್ಲ ಎಂಬ ಮಾತನ್ನು ಕೂಡ ತಿಳಿಸಿದ್ದಾರೆ .ಇನ್ನು ಇದಕ್ಕೆ ಸಂಬಂಧಪಟ್ಟಂತೆ ಇವತ್ತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆದಿದ್ದು ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯ ಎದುರುಗಡೆ ಪ್ರತಿಭಟನಾ ಘೋಷಣೆಯನ್ನು ಕೂಗಲಾಯಿತು .ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ ಹರೀಶ್ ಕುಮಾರ್ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಸೇರಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*