ಟಾರ್ಪೊಡೊಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಟೇಬಲ್ ಟೆನ್ನಿಸ್ ಪಂದ್ಯಾವಳಿ ;45 ಶಾಲೆಯ 295ಮಕ್ಕಳು ಭಾಗಿ

ಹಳೆಯಂಗಡಿಯ ಟಾರ್ಪೊಡೊಸ್ ಸ್ಪೋರ್ಟ್ಸ್ ಕ್ಲಬ್ ತನ್ನದೇ ರೀತಿಯಲ್ಲಿ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿದೆ .ಸಾಕಷ್ಟು ಯುವ ಪ್ರತಿಭೆಗಳಿಗೆ ಕ್ರೀಡಾ ಪ್ರೋತ್ಸಾಹವನ್ನು ನೀಡುವುದರ ಜೊತೆಗೆ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರ ಭವಿಷ್ಯ ರೂಪಿಸುವಲ್ಲಿ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಹೊಸ ಆಯಾಮವನ್ನು ಬರೆಯುತ್ತಲೇ ಬಂದಿದೆ .ಅಂದಹಾಗೆ ಇತ್ತೀಚೆಗೆ ಇದೇ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಟೇಬಲ್ ಟೆನ್ನಿಸ್ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು ,ವಿವಿಧ ಶಾಲೆಯ ಹಲವು ಕ್ರೀಡಾಸಕ್ತರು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ .ಇನ್ನು ಕಾರ್ಯಕ್ರಮವನ್ನು ತಲಪಾಡಿಯ ಶಾರದಾ ವಿದ್ಯಾನಿಕೇತನ ಸಂಸ್ಥೆಯ ಫಿಸಿಕಲ್ ಡೈರೆಕ್ಟರ್ ಆಗಿರುವ ಎಂ ಆರ್ ವಿನೋದ್ ಅವರು ಉದ್ಘಾಟನೆ ಗೊಳಿಸಿದ್ದಾರೆ .ಇನ್ನು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಸೈಂಟ್ ಆ್ಯಗ್ನೆಸ್ ನ ಶ್ರೀಮತಿ ದೇವಿಕಾ ,ಮಂಗಳೂರು ಮೌಂಟ್ ಕಾರ್ಮಲ್ ಶಿಕ್ಷಕಿ ಶ್ರೀಮತಿ ಕ್ಲಾರಾ ,ಎಸ್ಎಂಎಸ್ ಬ್ರಹ್ಮಾವರದ ಶಿಕ್ಷಕ ಭಾಸ್ಕರ್ ,ಉಡುಪಿ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ ಇದರ ಶಿಕ್ಷಕ ಸುರೇಶ್ ,ಹಾಗೂ ಇವೆಂಟ್ ಕಾಡಿನೇಟರ್ ಹಾಗೂ ಟಾರ್ಪಡೋಸ್ ಟೇಬಲ್ ಟೆನ್ನಿಸ್ ಕೋಚ್ ಅಶ್ವಿನ್ ಪಡುಕೋಣೆ, ಸಂತೋಷ್ ಕಾರ್ವಿ, ಪ್ರತಾಪ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು .ಅಂದ ಹಾಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ೪೫ ಶಾಲೆಯ ೨೯೫ ಮಕ್ಕಳು ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು ;೧೩ವರ್ಷದ ಕೆಳಗಿನ ಬಾಲಕಿಯರ ವಿಭಾಗದಲ್ಲಿ ಮಣಿಪಾಲದ ಮಾಧವಕೃಪಾ ಶಾಲೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ .ಅದೇ ರೀತಿ ಎರಡನೇ ಸ್ಥಾನಕ್ಕೆ ಮಂಗಳೂರಿನ ಸೈಂಟ್ ಆಗ್ನೆಸ್ ಇಂಗ್ಲಿಷ್ ಮೀಡಿಯಂ ಶಾಲೆ ತೃಪ್ತಿ ಪಟ್ಟುಕೊಂಡಿದೆ. ಮೂರನೇ ಸ್ಥಾನವನ್ನು ಬ್ರಹ್ಮಾವರದ ಎಸ್ಎಂಎಸ್ ಇಂಗ್ಲಿಷ್ ಮೀಡಿಯಂ ಶಾಲೆ ಪಡೆದುಕೊಂಡಿದೆ .ಇನ್ನು ೧೩ರಕೆಳಗಿನ ಬಾಲಕರ ವಿಭಾಗದಲ್ಲಿ ಮಂಗಳೂರಿನ ಶ್ರೀ ಚೈತನ್ಯ ಟೆಕ್ನೋ ಶಾಲೆ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು ,ಎರಡನೇ ಸ್ಥಾನವನ್ನು ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಪಡೆದುಕೊಂಡಿದೆ. ಅದೇ ರೀತಿ ಎರಡನೇ ರನ್ನರ್ ಸ್ಥಾನವನ್ನು ಮಂಗಳೂರಿನ ದಿಲ್ಲಿ ಪಬ್ಲಿಕ್ ಸ್ಕೂಲ್ ಹಾಗೂ ಮಣಿಪಾಲದ ಮಾಧವ ಕೃಪಾ ಸ್ಕೂಲ್ ಪಡೆದುಕೊಂಡಿದೆ .ಜೊತೆಗೆ ೧೬ರ ಕೆಳಗಿನ ಬಾಲಕರ ವಿಭಾಗದಲ್ಲಿ ಮೊದಲ ಸ್ಥಾನವನ್ನು ಮಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ ಪಡೆದುಕೊಂಡಿದ್ದು ;ಎರಡನೇ ಸ್ಥಾನವನ್ನು ಮಂಗಳೂರಿನ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ಪಡೆದುಕೊಂಡಿದೆ .ಅದೇ ರೀತಿಯಾಗಿ ಸೆಕೆಂಡ್ ರನ್ನರ್ಸ್ ಆಗಿಮಣಿಪಾಲದ ಮಾಧವಕೃಪಾ ಶಾಲೆ ಹಾಗೂ ಮಲ್ಪೆಯ ನಾರಾಯಣ ಗುರು ಇಂಗ್ಲಿಷ್ ಮೀಡಿಯಂ ಶಾಲೆ ಪ್ರಶಸ್ತಿಯನ್ನು ಪಡೆದುಕೊಂಡಿದೆ .ಇನ್ನು ೧೬ ವರ್ಷದ ಕೆಳಗಿನ ಬಾಲಕಿಯರ ವಿಭಾಗದಲ್ಲಿ ಮೊದಲ ಸ್ಥಾನವನ್ನು ಮಂಗಳೂರಿನ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ಪಡೆದುಕೊಂಡಿದ್ದು ಎರಡನೇ ಸ್ಥಾನಕ್ಕೆ ಮಂಗಳೂರಿನ ದಿಲ್ಲಿ ಪಬ್ಲಿಕ್ ಸ್ಕೂಲ್ ತೃಪ್ತಿ ಪಟ್ಟುಕೊಂಡಿದೆ. ಅದೇ ರೀತಿ ಸೆಕೆಂಡ್ ರನ್ನರ್ ಅಪ್ ಆಗಿ ತಲಪಾಡಿಯ ಶಾರದಾ ವಿದ್ಯಾನಿಕೇತನ ಹಾಗೂ ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆ ಪಡೆದುಕೊಂಡಿದೆ .ಇನ್ನು ಇಷ್ಟು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದ ರಾಷ್ಟ್ರೀಯ ಅಥ್ಲೀಟ್ ಶ್ರೀಮತಿ ಬಬಿತಾ ಶೆಟ್ಟಿ ಹಾಗೂ ಪಂದ್ಯಾವಳಿಗೆ ಪದಕ ಹಾಗೂ ಟ್ರೋಫಿಗಳನ್ನು   ಮಾರುತಿ ಮುಖ ಕ್ರಿಕೆಟ್ ಟೀಮ್ ನ ಕ್ಯಾಪ್ಟನ್ ಆಗಿರುವ ಶೈಲೇಶ್ ಸುವರ್ಣ ,ಪ್ರಮಾಣ ಪತ್ರ ಪದಕ ಹಾಗೂ ಟ್ರೋಫಿಗಳನ್ನು ನೀಡಿ ಸನ್ಮಾನಿಸಿದರು.

Be the first to comment

Leave a Reply

Your email address will not be published.


*