ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾದ್ ವಿಧಿವಶ

 ಜುಲೈ 19ರಂದು ಉಳ್ಳಾಲದ ಕೊಣಾಜೆಯ ಅಸೈಗೊಳಿ ಬಳಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಸವಾದ್ ೨೩ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಈತ ಪಡೆಯುತ್ತಿದ್ದು ಅಸೈಗೋಳಿಯ ಪುಲ್ಲು ನಿವಾಸಿ ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಸುಲೈಮಾನ್ ಪುಲ್ಲು ಅವರ ಏಕೈಕ ಪುತ್ರನಾಗಿದ್ದಾನೆ ..ಇನ್ನು ಮಹಮ್ಮದ್ ಸವಾದ್ ಗುರುವಾರ ರಾತ್ರಿ ಕೊಣಾಜೆ ಕಡೆಯಿಂದ ಮಂಗಳೂರು ಕಡೆ ತನ್ನ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಮಂಗಳೂರು ಕಡೆಯಿಂದ ಕೊಣಾಜೆ ಕಡೆ ಸಂಚರಿಸುತ್ತಿದ್ದಾಗ ಬೈಕ್ ಹಠಾತನೇ ಅಡ್ಡ ಬಂದಾಗ ಸವಾದ್ ಬೈಕ್ ಡಿಕ್ಕಿ ಹೊಡೆದಿತ್ತು ಏನು ಗಂಭೀರ ಗಾಯಗೊಂಡಿದ್ದ ಸವಾದ್ ನನ್ನ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶನಾಗಿದ್ದಾನೆ ಪಿಎ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಸವಾದ್ ತಾಯಿ ತಂದೆ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ .

Be the first to comment

Leave a Reply

Your email address will not be published.


*