ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ

ಮಂಗಳೂರು: ಯುವಜನತೆಯಲ್ಲಿ ದುಶ್ಚಟಗಳ ಕುರಿತಂತೆ ಅರಿವು ಮೂಡಿಸಿ, ಆರೋಗ್ಯವಂತ ಯುವಪೀಳಿಗೆಯನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಸ್ವಾಸ್ಥ್ಯ ಸಂಕಲ್ಪ ಉದ್ಘಾಟನೆ, ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಹಾಗೂ ಜನ ಜಾಗೃತಿ ಜಾಥಾ ಕಾರ್ಯಕ್ರಮವು ಜು.18ರಂದು ಬೆಳಗ್ಗೆ 10:15ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಯಿತು.
ಜನಜಾಗೃತಿ ಜಾಥಾ ಬೆಳಗ್ಗೆ 9 ಗಂಟೆಗೆ ನಗರದ ಅಂಬೇಡ್ಕರ್ ವೃತ್ತ(ಜ್ಯೋತಿ)ದಿಂದ ಆರಂಭಗೊಂಡು ಪುರಭವನದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಧಾರಾಕಾರ ಮಳೆ ಸುರಿದರೂ ಕೊಡೆಯೊಂದಿಗೆ ಜಾಥಾ ಯಶಸ್ವಿಗೊಂಡಿತು. ಜಾಥಾವನ್ನು ಡಿಸಿಪಿ ಲಕ್ಷ್ಮೀ ಗಣೇಶ್ ಉದ್ಘಾಟಿಸಿದರು.. ಬಳಿಕ ಸಭಾ ಕಾರ್ಯಕ್ರಮ ಜರುಗಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಯುವ ಪೀಳಿಗೆಯು ಮಾದಕ ವಸ್ತುಗಳ ವ್ಯಸನಿಗೆ ತುತ್ತಾಗಿ ಯುವ ಶಕ್ತಿಯ ಭವಿಷ್ಯವನ್ನು ಕಳಕೊಂಡಿದ್ದಾರೆ. ನಮ್ಮ ಕಣ್ಣನ್ನೆ ನಂಬದ ರೀತಿಯಲ್ಲಿ ಮಾದಕ ವಸ್ತುಗಳು ಸಮಾಜದಲ್ಲಿ ಮಾರಕವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಶ್ರೀ ಮಹಾಬಲ ಚೌಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಶ್ರೀ ಕಡ್ಲೂರು ಸತ್ಯನಾರಯಣಾಚಾರ್ಯ, ಶ್ರೀ ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ, ಶ್ರೀ ಸಂದೀಪ್ ಪಾಟೇಲ್, ಶ್ರೀ ಯೋಗೀಶ್ ಆಚಾರ್ಯ, ಡಾ| ಎಸ್,ಬಿ ಅಪ್ಪಾಜಿಗೌಡ, ಶ್ರೀ ಸತೀಶ್ ಶೆಟ್ಟಿ, ಶ್ರೀಮತಿ ವಿನುತ ರೈ, ಶ್ರೀ ಮಹಮ್ಮದ್ ಇಸ್ಮಾಯಿಲ್, ಶ್ರೀ ದಯಾನಂದ ಕತ್ತಾಲ್‍ಸಾರ್ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*