ಹಾಡು ಹಗಲೇ ನಾಡಿನಲ್ಲಿ ಕಾಡುಕೋಣ ಪ್ರತ್ಯಕ್ಷ

ಬಂಟ್ವಾಳ: ಕಾಡಿನಲ್ಲಿರಬೇಕಾದ ಭಾರಿ ಗಾತ್ರದ ಕಾಡುಕೋಣವೊಂದು ಹಾಡುಹಗಲೇ ನಾಡಿನಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ. ಮುಡಿಪು ಸಮೀಪದ ಮೂಳೂರು ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡುಕೋಣವೊಂದು ಈಗ ಜನರ ಆತಂಕಕ್ಕೆ ಕಾರಣವಾಗಿದೆ.
ಇಲ್ಲಿನ ಮುಡಿಪು – ಇರಾ ಸಂಪರ್ಕಿಸುವ ಮೂಳೂರು ರಸ್ತೆಯ ಕೈಗಾರಿಕಾ ಪ್ರದೇಶದ ಬಳಿಯಲ್ಲಿ ಈ ಭಾರಿ ಗಾತ್ರದ ಕಾಡುಕೋಣ ಕಾಣಿಸಿಕೊಂಡಿದೆ. ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಒಂಟಿ ಕಾಡುಕೋಣ ರಸ್ತೆ ದಾಟಿ ಹತ್ತಿರದ ಕಾಡಿಗೆ ಸೇರಿದೆ.
ಹೀಗೆ ಹಾಡುಹಗಲೇ ರಾಜಾರೋಷವಾಗಿ ತಿರುಗಾಟ ನಡೆಸುತ್ತಿರುವ ಕಾಡುಕೋಣ ಕಂಡ ಜನರು ಆತಂಕಕ್ಕೆ ಒಳಗಾಗಿದ್ದಾರೆ.

Be the first to comment

Leave a Reply

Your email address will not be published.


*